Job Description: * ಇತ್ತೀಚಿಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಾಡಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣವನ್ನು ಬೆಳೆಸಿತ್ತು, ಇದೀಗ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿದೆ, ಇದೀಗ ಭಾರತವು ಸತತ 8 ನೇ ಬಾರಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೋಲನ್ನು ಕಂಡಿದೆ. * ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ, ಹಾಗೂ ದಕ್ಷಿಣ ಆಫ್ರಿಕಾ ತಂಡವು 4 ನೇ ಸ್ಥಾನಕ್ಕೆ ಏರಿಕೆಯನ್ನು ಕಂಡಿದೆ. * ಭಾರತವು ಈ ಹಿಂದೆ 1992 ರಿಂದ ಆಡಿದ '8' ಸರಣಿಗಳಲ್ಲಿ ಒಂದೇ ಒಂದು ಸರಣಿಯಲ್ಲಿ ಜಯಗಳಿಸಿಲ್ಲ. * ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರೋಟೀಸ್ ಎಂದು ಕರೆಯುತ್ತಾರೆ, ಈ ತಂಡವು ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುತ್ತದೆ. ದಕ್ಷಿಣ ಆಫ್ರಿಕಾವು ಟೆಸ್ಟ್, ಏಕದಿನ ಅಂತರಾಷ್ಟ್ರೀಯ ಮತ್ತು ಟ್ವೆಂಟಿ-20 ಅಂತರಾಷ್ಟ್ರೀಯ ಸ್ಥಾನಮಾನದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯನಾಗಿದೆ. * ದಕ್ಷಿಣ ಆಫ್ರಿಕಾ ತಂಡವು ಮೊದಲ ಟೆಸ್ಟ್ ಪಂದ್ಯವನ್ನು 1889 ರ ಮಾರ್ಚ್'ನಲ್ಲಿ ಇಂಗ್ಲೆಂಡ್ ವಿರುದ್ಧ ಸೇಂಟ್ ಜಾರ್ಜ್ ಪಾರ್ಕ್, ಪೋರ್ಟ್ ಎಲಿಜಬೆತ್ ಎಂಬ ಪ್ರದೇಶದಲ್ಲಿ ಆಡಿತ್ತು. ಹಾಗೂ ಇತ್ತೀಚಿಗೆ ಆಡಿರುವ ಕೊನೆಯ ಟೆಸ್ಟ್ ಪಂದ್ಯ 2022 ರ ಜನೆವರಿ 6 ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಆಡಿದೆ. * ಟೀಮ್ ಇಂಡಿಯಾವನ್ನು ಮೆನ್ ಇನ್ ಬ್ಲೂ ಎಂದೂ ಕರೆಯಲಾಗುತ್ತದೆ, ಈ ಭಾರತ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವು ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. * ಪ್ರಸ್ತುತ ಭಾರತ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ. * ಭಾರತವು ಮೊದಲ ಟೆಸ್ಟ್ ಪಂದ್ಯವನ್ನು 1932 ರ ಜೂನ್'ನಲ್ಲಿ ಲಂಡನ್‌ನ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದೆ.