Job Description: * ಪ್ರಸ್ತುತ ರಕ್ಷಣಾ ಸಚಿವಾಲಯವು ನಿವೃತ್ತಿ ಹೊಂದಿದ ಯೋಧರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಪಿಂಚಣಿಯ ಬಗೆಗಿನ ಅನೇಕ ಸಮಸ್ಯೆಗಳ ವಿಷಯವಾಗಿ ದೂರುಗಳನ್ನೂ ಸಲ್ಲಿಸಲು ಆನ್‌ಲೈನ್ ಪೋರ್ಟಲ್'ನ್ನು ಆರಂಭಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ತಿಳಿಸಿದ್ದಾರೆ. * ಈ ವೆಬ್‌ಸೈಟ್‌'ನ ಮೂಲಕ ನಿವೃತ್ತಿ ಹೊಂದಿದ ಯೋಧರು ಹಾಗೂ ಅವರ ಕುಟುಂಬದವರು ಪಿಂಚಣಿಗೆ ಸಂಬಂಧಿಸಿದ ದೂರುಗಳನ್ನು ನೇರವಾಗಿ ನಿವೃತ್ತ ಸೈನಿಕರ ಕಲ್ಯಾಣ ವಿಭಾಗಕ್ಕೇ ಸಲ್ಲಿಸಲು ಅವಕಾಶಮಾಡಿಕೊಡಲಾಗಿದೆ ಎಂದು ತಿಳಿಸುತ್ತಾ ಕೇಂದ್ರ ರಕ್ಷಣಾ ಸಚಿವರು ವೆಬ್‌ಸೈಟ್‌'ನ್ನು ಲೋಕಾರ್ಪಣೆ ಮಾಡಿದ್ದಾರೆ. * ಇದೀಗ ನಿವೃತ್ತ ಸೈನಿಕರ ಕಲ್ಯಾಣ ಇಲಾಖೆಗೆ ಸುಮಾರು 320 ಕೋಟಿ ರೂ. ಮೊತ್ತವನ್ನು ಒದಗಿಸಲಾಗಿದೆ. ಈ ಮೊತ್ತದ ಮೂಲಕ ಬಾಕಿ ಉಳಿದುಕೊಂಡಿರುವ ಪಿಂಚಣಿ ಮೊತ್ತವನ್ನು ಆದಷ್ಟು ಬೇಗನೆ ನಿವೃತ್ತ ಯೋಧರಿಗೆ ನೀಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ತಿಳಿಸಿದ್ದಾರೆ. * ಇದೀಗ ಮಾಜಿ ಸೈನಿಕ (ex-servicemen (ESM))ರು ಹಾಗೂ ಕುಟುಂಬ ಪಿಂಚಣಿ ಸಂಬಂಧಿತ ಕುಂದುಕೊರತೆಗಳು ಮತ್ತು ತ್ವರಿತವಾಗಿ ಪಿಂಚಣಿಯನ್ನು ಸಮಸ್ಯೆಗಳನ್ನು ಪರಿಹರಿಸಲು 'ರಕ್ಷಾ ಪಿಂಚಣಿ ಶಿಕಾಯತ್ ನಿವರಣ್ ಪೋರ್ಟಲ್ ನ್ನು ಆರಂಭಿಸಲಾಗಿದೆ ಎಂದು ರಕ್ಷಣಾ ಸಚಿಚಾಲಯ ತಿಳಿಸಿದೆ, ಎಂದು ರಾಜನಾಥ್ ಸಿಂಗ್ ಅವರು ಟ್ವಿಟ್ಟರ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. * ಈ ಪಿಂಚಣಿ 'ಪೋರ್ಟಲ್‌' ಅಪ್ಲಿಕೇಶನ್ ಸ್ವಯಂ-ಉತ್ಪಾದಿಸುತ್ತದೆ ಹಾಗೂ ಅರ್ಜಿದಾರರಿಗೆ ಅವರ ನೋಂದಾಯಿತ ಸಂಖ್ಯೆ ಹಾಗೂ ಇಮೇಲ್‌ನ ಮೂಲಕ ಅಪ್ಲಿಕೇಶನ್ ಟ್ರ್ಯಾಕಿಂಗ್ ಸ್ಥಿತಿಯನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ.