Job Description: * ಪ್ರಸ್ತುತ ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯು ತನ್ನನ್ನು ತಾನು ಬಾಲ್ಯವಿವಾಹ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಿಕೊಂಡಿದೆ. * ಈ ಹಿಂದಿನ 2020 ಮತ್ತು 2021 ನೇ ವರ್ಷಗಳಲ್ಲಿ ಒಡಿಶಾ ರಾಜ್ಯದ ಗಂಜಾಂ ಜಿಲ್ಲಾಡಳಿತವು ಸುಮಾರು 450 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಸಮರ್ಥವಾಗಿದೆ. ಇದೀಗ ಅಲ್ಲಿನ ಆಡಳಿತವು ಯಾವುದೇ ಮದುವೆಗಳು ನಡೆಯಬೇಕಾದರೆ ಆಧಾರ್ ಕಾರ್ಡ್'ನ್ನು ಕಡ್ಡಾಯಗೊಳಿಸಿದೆ. * ನಿರ್ಭಯಾ ಕಧಿ ಎಂದರೆ ಭಯವಿಲ್ಲದ ಮೊಗ್ಗು ಎಂದರ್ಥ: ಗಂಜಾಂ ಜಿಲ್ಲೆಯಲ್ಲಿ ಈ ನಿರ್ಭಯ ಕಧಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಕಾರ್ಯಕರ್ಮವು ಹದಿಹರೆಯದ ಹುಡುಗಿಯರು ಶಾಲೆಯಿಂದ ದೋರವಿರುವದನ್ನು ತಡೆಯಲು ಆರಂಭಿಸಲಾಗಿದೆ. ಗಂಜಾಂ ಜಿಲ್ಲೆಯಲ್ಲಿ ನಡೆದಿರುವ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 12 ರಿಂದ 18 ವರ್ಷ ವಯಸ್ಸಿನ ಬಾಲಕಿಯುರು ಸತತವಾಗಿ '5' ದಿನಗಳವರೆಗೆ ಶಾಲೆಗೆ ಗೈರಾದರೆ(ಬರದಿದ್ದರೆ) ಆ ವಿದ್ಯಾರ್ಥಿಗಳ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಲು ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಹಿಂದಿನ ಎರಡು ವರ್ಷಗಳಲ್ಲಿ ಸರಿ ಸುಮಾರು 01 ಲಕ್ಷ ಹದಿಹರೆಯದವರು ಈ ಕಾರ್ಯಕ್ರಮದ ಅಡಿಯಲ್ಲಿ ಕೌನ್ಸೆಲಿಂಗ್‌ಗೆ ಒಳಪಟ್ಟಿದ್ದಾರೆ. * ಒಡಿಶಾ ರಾಜ್ಯದ ಗಂಜಾಂ ಜಿಲ್ಲಾಡಳಿತವು ಯಾವುದೇ ಬಾಲ್ಯವಿವಾಹದ ಬಗ್ಗೆ ಮಾಹಿತಿ ನೀಡುವವರಿಗೆ 5,000 ರೂ. ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ, ಇದೀಗ ಈ ಮೊತ್ತವನ್ನು 50,000 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. * ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ಅಂದಾಜಿನ ಪ್ರಕಾರ ಪ್ರತಿ ವರ್ಷವು ಭಾರತದಲ್ಲಿ ಸುಮಾರು 18 ವರ್ಷದೊಳಗಿನ ಕನಿಷ್ಠ 1.5 ಮಿಲಿಯನ್ ಹುಡುಗಿಯರು ಮದುವೆಯಾಗುತ್ತಿವೆ ಎಂದು ತಿಳಿಸಿದೆ. *ಪ್ರಸ್ತುತ 2015-16 ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮಾಹಿತಿಗಳ ಪ್ರಕಾರ ಕೋವಿಡ್-19 ಸಮಯಕ್ಕೂ ಮೊದಲು ಬಾಲ್ಯ ವಿವಾಹಗಳು 18 ವರ್ಷ ತುಂಬುವ ಮೊದಲು ನಾಲ್ಕು ಹುಡುಗಿಯರಲ್ಲಿ ಕೇವಲ ಒಬ್ಬ ಹುಡುಗಿಯ ಮದುವೆಯಾಗುತ್ತಿತು ಎಂದು ವರದಿ ಮಾಡಿದೆ, ಆದರೆ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಅತ್ಯಧಿಕವಾಗಿ ಬಾಲ್ಯ ವಿವಾಹಗಳು ನಡೆದಿವೆ ಎಂದಿದ್ದಾರೆ.