Job Description: * ಪ್ರಸ್ತುತ ಶ್ರೀಲಂಕಾ ಸರ್ಕಾರವು ಇತ್ತೀಚಿಗೆ ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ (LIOC) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅನ್ವಯ ಶ್ರೀಲಂಕಾ ತೈಲ ಟ್ಯಾಂಕ್‌ಗಳನ್ನು IOC'ಗೆ ಗುತ್ತಿಗೆ ನೀಡಲಿದೆ. * ಶ್ರೀಲಂಕಾ 50 ವರ್ಷಗಳ ಕಾಲ 14 ಟ್ಯಾಂಕ್‌ಗಳನ್ನು LIOC ಗೆ ಗುತ್ತಿಗೆ ನೀಡಿದೆ, ಹಾಗೂ ಇದೀಗ 24 ಟ್ಯಾಂಕ್‌ಗಳನ್ನು CPCಗೆ ಗುತ್ತಿಗೆ ನೀಡಿದೆ. ಇದೀಗ CPC LIOC ಹಾಗೂ ಟ್ರಿಂಕೋ ಪೆಟ್ರೋಲಿಯಂ ಪ್ರೈವೇಟ್ ಲಿಮಿಟೆಡ್‌'ನ ಜಂಟಿ ಉದ್ಯಮವಾಗಿದೆ. CPC ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್'ಆಗಿದೆ. * ಪ್ರಸ್ತುತ CPC ದೇಶದಲ್ಲಿ 61 ತೈಲ ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲಿದೆ. ಈ ಹಿಂದೆ 2003 ರಲ್ಲಿ ಸಹಿ ಮಾಡಲಾಗಿರುವ ಒಪ್ಪಂದದ ಅಡಿಯಲ್ಲಿ, ಇದೀಗ ಶ್ರೀಲಂಕಾ ರಾಷ್ಟ್ರವು ತನ್ನ 99 ಟ್ಯಾಂಕ್ ತೈಲ ಫಾರ್ಮ್‌ಗಳನ್ನು ಭಾರತಕ್ಕೆ ಗುತ್ತಿಗೆ ರೂಪದಲ್ಲಿ ನೀಡಲು ಒಪ್ಪಿಗೆ ನೀಡಿದೆ. ಈ ಹೊಸ ಒಪ್ಪಂದದಿಂದ ಅನ್ವಯ ಇದನ್ನು ರದ್ದುಪಡಿಸಲಾಗಿದೆ, ಇದೀಗ ಹೊಸ ಒಪ್ಪಂದ ಮತ್ತು ಆಡಳಿತ ರಚನೆಯನ್ನು ತರಲಿದೆ. * ಈ ಹಿಂದೆ 1987 ರಿಂದ ಭಾರತ & ಶ್ರೀಲಂಕಾ ಸರ್ಕಾರಗಳು ಟ್ರಿಂಕೋಮಲಿ ಟ್ಯಾಂಕ್ ಫಾರ್ಮ್'ನ್ನು ವಿಭಜಿಸಲು ಪ್ರಯತ್ನಪಡುತ್ತಿವೆ. ಟ್ರಿಂಕೋಮಲಿ ಒಪ್ಪಂದವು ಹಲವು ವರ್ಷಗಳಿಂದ ವಿವಾದಾತ್ಮಕವಾಗಿತ್ತು. ಶ್ರೀಲಂಕಾದಲ್ಲಿನ ಅಂತರ್ಯುದ್ಧಗಳಿಂದಾಗಿ ಹಾಗೂ ರಾಜಕೀಯ ಅಸ್ಥಿರತೆಯ ಹಿನ್ನಲೆಯಿಂದ ಒಪ್ಪಂದವು ನಿಷ್ಕ್ರಿಯವಾಗಿತ್ತು. * ಟ್ರಿಂಕೋಮಲಿ ಇದು ಏಷ್ಯಾ ಹಾಗೂ ಗಲ್ಫ್ ರಾಷ್ಟ್ರಗಳ ಹಡಗು ಮಾರ್ಗದಲ್ಲಿದೆ, ಹಾಗೂ ಇದೊಂದು ವಿಶ್ವದ ಅತ್ಯಂತ ಜನಸಂದಣಿಯ ತೈಲ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. 2ನೇ ಮಹಾಯುದ್ಧದ ವೇಳೆಯಲ್ಲಿ ಬಂದರು ಮಿತ್ರರಾಷ್ಟ್ರಗಳ ಪ್ರಮುಖ ಪೂರೈಕೆ ಕೇಂದ್ರವಾಗಿತ್ತು. ಶ್ರೀಲಂಕಾದ ಈ ಬಂದರು ಭಾರತದ ಚೆನ್ನೈಗೆ ಹತ್ತಿರದಲ್ಲಿದೆ. ಈ ಎಲ್ಲ ಟ್ಯಾಂಕ್ ಫಾರ್ಮ್'ಗಳು ಭಾರತೀಯ ಹಡಗುಗಳಿಗೆ ಅಧಿಕ ಪ್ರಮಾಣದಲ್ಲಿ ಇಂಧನ ತುಂಬಲು ಅನಕೂಲ ಮಾಡುತ್ತವೆ, ಅಷ್ಟೇ ಅಲ್ಲದೇ ಈ ಒಪ್ಪಂದವು ಶ್ರೀಲಂಕಾವನ್ನು ಪೆಟ್ರೋಲಿಯಂ ಪ್ರಾದೇಶಿಕ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡುತ್ತದೆ. * ತೈಲ ಟ್ಯಾಂಕ್ ಫಾರ್ಮ್: ಇದೊಂದು ತೈಲ ಸಂಗ್ರಹಣಾ ಕೇಂದ್ರ. ಇದರಿಂದ ಅಂತಿಮ ಬಳಕೆದಾರರಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ರವಾನಿಸಲಾಗುತ್ತದೆ. *ಈ ಹಿಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಶ್ರೀಲಂಕಾ ಅಧ್ಯಕ್ಷ ಜಯವರ್ಧನೆ ಅವರು ಟ್ರಿಂಕೋಮಲಿ ಟ್ಯಾಂಕ್ ಫಾರ್ಮ್'ವನ್ನು ಈ ಹಿಂದೆ 1987 ರಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದರು, ಆದರೆ ಅದು ಪ್ರಗತಿಯು ಕಾರ್ಯದಲ್ಲಿ ಸ್ಥಗಿತವಾಯಿತು, ಮತ್ತೇ 2003 ರಲ್ಲಿ ಲಂಕಾ IOC'ನ್ನು ರಚಿಸಿತು, ಆದರೆ ಆಗಲು ಕೂಡ ಈ ಒಪ್ಪಂದವು ದೇಶದಲ್ಲಿನ ರಾಜಕೀಯ ಅಸ್ಥಿರತೆಯಿಂದ ಮತ್ತೇ ಸ್ಥಗಿತವಾಯಿತು. ಮತ್ತೇ 2015 ರಲ್ಲಿ ಪ್ರಧಾನಿ ಮೋದಿಯವರ ಶ್ರೀಲಂಕಾಕ್ಕೆ ಭೇಟಿಯಾದರು ಅಲ್ಲಿನ ಟ್ರಿಂಕೋಮಲಿಯಲ್ಲಿ ಪೆಟ್ರೋಲಿಯಂ ಹಬ್'ನ್ನು ರಚಿಸಲು ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಿದರು.