Job Description: * ಪ್ರಸ್ತುತ ಕ್ಯಾಪ್ಟನ್ ಆಮಿ ಬೌರ್ನ್‌ಸ್ಮಿಡ್ ಅವರು US ನೌಕಾಪಡೆಯಲ್ಲಿ ಪರಮಾಣು ವಾಹಕ(Nuclear carrier)ವನ್ನು ಮುನ್ನಡೆಸಿದ ಮೊದಲ ಮಹಿಳೆಯಾಗಿದ್ದಾರೆ. * ಕ್ಯಾಪ್ಟನ್ ಆಮಿ ಬೌರ್ನ್‌ಸ್ಮಿಡ್ ಅವರು ಈ ಹಿಂದೆ 2016 ರಿಂದ 2019 ರವರೆಗೆ ಅಬ್ರಹಾಂ ಲಿಂಕನ್‌ರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ, ಅಬ್ರಹಾಂ ಲಿಂಕನ್ ತನ್ನ ನಿರ್ವಹಣಾ ಅವಧಿಯನ್ನು ಏಪ್ರಿಲ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಇವರು ಕ್ಯಾಪ್ಟನ್ ವಾಲ್ಟ್ ಸ್ಲಾಟರ್‌ನಿಂದ ಆದೇಶವನ್ನು ವಹಿಸಿಕೊಂಡಿದ್ದಾರೆ ಎಂದು ಸ್ಯಾನ್ ಡಿಯಾಗೋದಲ್ಲಿ ಸಿಬಿಎಸ್ 8 ಮಾಹಿತಿ ನೀಡಿದೆ. * ಕ್ಯಾಪ್ಟನ್ ಆಮಿ ಬೌರ್ನ್‌ಸ್ಮಿಡ್ ಅವರು ಈ ಮೊದಲು ಹೆಲಿಕಾಪ್ಟರ್ ಮ್ಯಾರಿಟೈಮ್ ಸ್ಟ್ರೈಕ್ ಸ್ಕ್ವಾಡ್ರನ್ 70 ಹಾಗೂ ಉಭಯಚರ ಸಾರಿಗೆ ಡಾಕ್ ಸ್ಯಾನ್ ಡಿಯಾಗೋದ ಕಮಾಂಡಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. US ಮಿಲಿಟರಿ ಇತಿಹಾಸದ ವೆಬ್‌ಸೈಟ್‌ ನೀಡಿರುವ ಮಾಹಿತಿಯ ಪ್ರಕಾರ 2ನೇ ಮಹಾಯುದ್ಧದ ಸಂಧರ್ಭದಲ್ಲಿ ಮೊದಲ ಬಾರಿಗೆ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಲು ದೊಡ್ಡ ಪ್ರಮಾಣದಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಯಿತು. * ಈ ನೌಕಾಪಡೆಯು 1974 ರಲ್ಲಿ ಮೊದಲ ಮಹಿಳೆಯನ್ನು ಏವಿಯೇಟರ್ ಎಂದು ಗುರುತಿಸಿತು, ಇದಾದ ಬಳಿಕ 1994 ರಲ್ಲಿ ಯುಎಸ್‌ಸ್‌ ಡ್ವೈಟ್ ಡಿ. ಐಸೆನ್‌ಹೋವರ್ ಎಂಬ ಯುದ್ಧ ಹಡಗಿಗೆ ಮೊದಲ ಬಾರಿ ಮಹಿಳೆಯರನ್ನು ನಿಯೋಜನೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. * ಆಮಿ ಎನ್. ಬೌರ್ನ್‌ಸ್ಮಿಡ್(Amy N. Bauernschmidt) US ನೌಕಾಪಡೆಯ ಅಧಿಕಾರಿಯಾಗಿದ್ದಾರೆ. ಇವರು 2021 ರ ಆಗಸ್ಟ್. 19 ರಂದು USS ಅಬ್ರಹಾಂ ಲಿಂಕನ್'ನ ಕಮಾಂಡ್'ನ್ನು ವಹಿಸಿಕೊಂಡರು.