Job Description: * ಪ್ರತಿ ವರ್ಷವು ಜನವರಿ 6 ರಂದು ವಿಶ್ವ ಯುದ್ಧ ಅನಾಥರ ದಿನವನ್ನು ಆಚರಿಸಲಾಗುತ್ತದೆ, ಈ ದಿನವನ್ನು ಯುದ್ಧಗಳಿಂದಾಗಿ ಪೋಷಕರನ್ನು ಕಳೆದುಕೊಂಡ ಅನಾಥರಾದ ಮಕ್ಕಳ ಬಗ್ಗೆ ಜಾಗೃತಿ ಮೂಡಿಸಲು ಆಚರಣೆ ಮಾಡಲಾಗುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ ಜರುಗಿರುವ ಯುದ್ಧಗಳಲ್ಲಿ ಅದೆಷ್ಟೋ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ, ಅವರೆಲ್ಲರೂ ಅನೇಕ ರೀತಿಯ ಕಷ್ಟಗಳನ್ನು ಎದುರಿಸಿದ್ದಾರೆ. * ಪ್ರಸ್ತುತ ಯುದ್ಧಗಳಿಂದಾಗಿ ಪೋಷಕರನ್ನು ಕಳೆದುಕೊಂಡ ಅನಾಥರಾದ ಮಕ್ಕಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಜನರಲ್ಲಿ ಅರಿವು ಮೂಡಿಸುವದರ ಜೊತೆಗೆ ಆ ಮಕ್ಕಳಿಗೆ ಸಹಾಯ ಮಾಡಲು ಪ್ರಾನ್ಸ್‌ ಮೂಲದ ಎಸ್‌ಒಎಸ್‌ ಎನ್ಫಾಂಟ್ಸ್ ಮತ್ತು ಡಿಟ್ರೆಸಸ್ ಎಂಬ ಸಂಸ್ಥೆಯು ಈ ದಿನಾಚರಣೆಯನ್ನು ಆಚರಿಸಲು ಆರಂಭಿಸಿದೆ. * ಇದೀಗ ವಿಶ್ವಸಂಸ್ಥೆಯ ಒಬ್ಬ ಅಥವಾ ಇಬ್ಬರು ಪೋಷಕರನ್ನು ಯುದ್ಧಗಳ ಸಂಧರ್ಭಗಳಲ್ಲಿ ಕಳೆದುಕೊಂಡ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು 'ಯುದ್ಧ ಅನಾಥ' ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿಯು ಹೇಳಿದೆ. ಈ ಹಿಂದೆ 2015 ರಲ್ಲಿ ಸರಿ ಸುಮಾರು 14 ಕೋಟಿ "ಯುದ್ಧ ಅನಾಥರು'ರಿದ್ದರು. ಈ ಮೊದಲು 1990 ರಿಂದ 2001 ರ ನಡುವಿನ ಅವಧಿಯಲ್ಲಿ ಅನಾಥ ಮಕ್ಕಳ ಸಂಖ್ಯೆ ಅಧಿಕವಾಗಿತ್ತು. ಹಾಗೆಯೇ 2001 ರಿಂದ ಶೇ 0.7ರಷ್ಟು ಅನಾಥ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿ ವರದಿ ಮಾಡಿದೆ. * ಈ ಹಿಂದೆ 2020ರಲ್ಲಿ ನಡೆದಿರುವ ಸಂಘರ್ಷಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ವಿರುದ್ಧವಾಗಿ 26,425 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದೀಗ ಇಥಿಯೋಪಿಯಾ, ಅಫ್ಗಾನಿಸ್ತಾನ, ಸಿರಿಯಾ ಇನ್ನು ಅನೇಕ ದೇಶಗಳಲ್ಲಿ ಇನ್ನು ಸಂಘರ್ಷ ಮುಂದುವರೆಯುತ್ತಿದೆ, ಈ ಎಲ್ಲ ದೇಶಗಳಲ್ಲಿನ ಮಕ್ಕಳು ಅಭದ್ರತೆ, ಕೋಮು ಹಿಂಸಾಚಾರ, ಆರೋಗ್ಯದ ಸೌಲಭ್ಯಗಳಲ್ಲಿದೆ ಜೀವನವನ್ನು ಸಾಗಿಸುತ್ತಿದ್ದಾರೆ. * ವಿಶ್ವ ಅನಾಥ ಸಪ್ತಾಹವು 2005 ರಲ್ಲಿ ಆರಂಭವಾಯಿತು, ಯುನೈಟೆಡ್ ಕಿಂಗ್‌ಡಂ(UK)ನಲ್ಲಿ(World Orphan Week) WOW ವಿಶ್ವ ಅನಾಥರ ವಾರ 2009 ಫೆಬ್ರವರಿ 9-15 ರವೆರೆಗೆ ಹಾಗೂ ಯುನೈಟೆಡ್ ಸ್ಟೇಟ್ಸ್‌(US)ನಲ್ಲಿ WOW 2008 ಅಕ್ಟೋಬರ್ 5-11 ರಂದು ನಡೆಯಿತು. ಪ್ರಸ್ತುತ SOS ಮಕ್ಕಳ ಗ್ರಾಮಗಳು, USA ವಿಶ್ವ ಅನಾಥ ವಾರ 2008'ನ್ನು ಉತ್ತೇಜಿಸಲು 'WOW Us' ಎಂಬ ಆನ್‌ಲೈನ್ ವೀಡಿಯೊ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು, ಹಾಗೂ SOS ಚಿಲ್ಡ್ರನ್ಸ್ ವಿಲೇಜಸ್ ಕೆನಡಾ ಅಕ್ಟೋಬರ್ 2008 ರಲ್ಲಿ ವಿಶ್ವ ಅನಾಥ ವಾರವನ್ನು ಆರಂಭಿಸಿತು.