Job Description: * ಅಫ್ಘಾನಿಸ್ತಾನ ರಾಷ್ಟ್ರವನ್ನು ತಮ್ಮ ವಶಕ್ಕೆ ಪಡೆದಿರುವ ತಾಲಿಬಾನಿಗಳು ತಮ್ಮದೇ ಆದ ಸರ್ಕಾರವನ್ನು ರಚನೆ ಮಾಡಿವೆ, ಇದೀಗ ಈ ತಾಲಿಬಾನಿಗಳು ಅಫ್ಘಾನಿಸ್ತಾನ ದೇಶದ ರಕ್ಷಣೆಗಾಗಿ ದೇಶಾದ್ಯಂತ ಕಾರ್ಯಾಚರಿಸಲು ಹಾಗೂ ಸೇನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು ಮುಂದಾಗಿದ್ದಾರೆ, ಇದೀಗ ತಾಲಿಬಾನ್ ಸರ್ಕಾರವು ಇಸ್ಲಾಮಿಕ್ ಸ್ಟೇಟ್‌'ನಿಂದ ಅತಿದೊಡ್ಡ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದೆ, ಈ ಹಿನ್ನಲೆಯಿಂದಾಗಿ ತಾಲಿಬಾನ್ ಸರ್ಕಾರವು (Suicide Bombers) ಆತ್ಮಹತ್ಯಾ ಬಾಂಬರ್ಸ್'ಅನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆ ಮಾಡಿಕೊಳ್ಳುತ್ತಿದೆ. * ತಾಲಿಬಾನಿಗಳು ಕಳೆದ 20 ವರ್ಷಗಳಿಂದ ಅಫ್ಘಾನ್ನಲ್ಲಿದ್ದ ಯುಎಸ್ ಹಾಗೂ ಅಫ್ಘಾನ್ ಪಡೆಗಳ ಮೇಲೆ ದಾಳಿ ಮಾಡಲು ಹಾಗೂ ಅವರನ್ನು ಸೋಲಿಸಲು ಆತ್ಮಹತ್ಯಾ ಬಾಂಬರ್‌ಗಳನ್ನು ಬಳಸಿಕೊಳ್ಳುತ್ತಿದ್ದರು. ಇದೀಗ ತಾಲಿಬಾನ್ ಸರ್ಕಾರವು ಸೇನೆಯಲ್ಲಿ ಆತ್ಮಹತ್ಯಾ ಬಾಂಬರ್‌ಗಳು ನೇಮಕ ಮಾಡಿಕೊಳ್ಳುತ್ತಿದೆ, ಅವರುಗಳು ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಅಫ್ಘಾನಿಸ್ತಾನವನ್ನು ರಕ್ಷಿಸಲು ಸಿದ್ಧವಾಗಿದ್ದಾರೆ ಎಂದಿದ್ದಾರೆ. ಇದೀಗ ತಾಲಿಬಾನ್‌ನ ಉಪ ವಕ್ತಾರ ಬಿಲಾಲ್ ಕರಿಮಿ ಅವರು ತಿಳಿಸಿರುವ ಮಾಹಿತಿಯ ಪ್ರಕಾರ ದೇಶಾದ್ಯಂತ ಆತ್ಮಹತ್ಯಾ ಬಾಂಬರ್‌ಗಳ ಸ್ಕ್ವಾಡ್‌ಗಳನ್ನು ಸುಧಾರಿಸಲಾಗುತ್ತದೆ ಹಾಗೂ ಸಂಘಟಿಸಲಾಗುತ್ತದೆ ಎಂದಿದ್ದಾರೆ. * ಅಮೇರಿಕ ಸೇನಾ ಪಡೆಗಳು ಕಳೆದ ವರ್ಷ ಆಗಸ್ಟ್‌'ನಿಂದ ಅಫ್ಘಾನಿಸ್ತಾನ ರಾಷ್ಟ್ರವನ್ನು ತೊರೆದಿವೆ, ತದನಂತರ ತಾಲಿಬಾನ್ ಅಫ್ಘಾನಿಸ್ತಾನ ರಾಷ್ಟ್ರದ ಅಧಿಕಾರವನ್ನು ವಹಿಸಿಕೊಂಡಿವೆ ಇದೀಗ ರಾಷ್ಟ್ರವನ್ನು ಬಲಪಡಿಸಲು ಮುಂದಾಗಿವೆ. * ಪ್ರಸ್ತುತ ಆಫ್ಘಾನಿಸ್ತಾನ್'ನ ಉಗ್ರಗಾಮಿ ಗುಂಪು ಗಡಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿ ರಾಷ್ಟ್ರದ ರಕ್ಷಣೆಯನ್ನು ಮಾಡಲಿದ್ದಾರೆ, ಸರಿ ಸುಮಾರು 150,000 ಯೋಧರನ್ನು ಸೇನೆಗೆ ಸೇರಲು ಆಹ್ವಾನಿಸಲಾಗುತ್ತದೆ ಎಂದು ತಾಲಿಬಾನ್‌ನ ಮುಖ್ಯಸ್ಥ ಕ್ವಾರಿ ಫಸಿಹುದ್ದೀನ್‌'ರವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. * ಇದೀಗ ತಾಲಿಬಾನ್ ಸರ್ಕಾರವು ಮಿಲಿಟರಿ ಶ್ರೇಣಿಯನ್ನು ಪುನಃ ರಚಿಸಿದ ಬಳಿಕ ಈ ನೇಮಕಾತಿಗೆ ಚಾಲನೆ ಸಿಕ್ಕಿದೆ, ಇದೀಗ ತಾಲಿಬಾನಿ ಪಡೆಗಳು ಇಸ್ಲಾಮಿಕ್ ಸ್ಟೇಟ್ ನುಸುಳುಕೋರರನ್ನು ಗುರುತಿಸಲು ಅವರನ್ನು ಸೆರೆಹಿಡಿಯಲು ಆರಂಭಿಸಿದೆ ಎಂದಿದ್ದಾರೆ. * ತಾಲಿಬಾನ್ ಸರ್ಕಾರವು ಸೇನೆಯಲ್ಲಿ ಪುರುಷರು ಅಷ್ಟೇ ಅಲ್ಲದೇ ಮಹಿಳಾ ಬಾಂಬರ್ಗೂ ಅವಕಾಶ ನೀಡಲಾಗುತ್ತದೆ ಎಂದು ಮುಜಾಹಿದ್ ಅವರು ತಿಳಿಸಿದ್ದಾರೆ. ಸೇನೆಗೆ ಸೇರಿಸಿಕೊಳ್ಳುವದರ ಎಲ್ಲ ಕೆಲಸಗಳು ಕೊನೆಯ ಹಂತಕ್ಕೆ ತಲುಪಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಅಯತೊಲ್ಲಾ ಖ್ವಾರಿಝಾಮಿ ತಿಳಿಸಿದ್ದಾರೆ.