Job Description: * ಪ್ರಸ್ತುತ ಭಾರತ ಸರ್ಕಾರವು ಶೀಘ್ರದಲ್ಲೇ ದೇಶದ ನಾಗರಿಕನಿಗೆ ಇ-ಪಾಸ್ ಪೋರ್ಟ್(e-passports)ಗಳ ಸೇವೆಯನ್ನು ನೀಡಲು ಪ್ರಾರಂಭಿಸಲಿದೆ ಎಂದಿದ್ದಾರೆ, ಇದೀಗ ಈ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಅವರು ಟ್ವೀಟ್‌ ಮಾಡುವ ಮೂಲಕ ತಿಳಿಸಿದ್ದಾರೆ. * ಇದೀಗ ಸರ್ಕಾರವು ನೀಡುವ ಇ-ಪಾಸ್ ಪೋರ್ಟ್ʼಗಳನ್ನು ಬಯೋಮೆಟ್ರಿಕ್ ದತ್ತಾಂಶದೊಂದಿಗೆ ಸುರಕ್ಷಿತವಾಗಿರುವ ಚಿಪ್ʼಗಳಿಂದ ಸಿದ್ಧಪಡಿಸಲಾಗುವದು, ಮತ್ತೇ ಜಾಗತಿಕವಾಗಿ ವಲಸೆ ಪೋಸ್ಟ್ʼಗಳ ಮುಖಾಂತರ ಸುಗಮ ಪ್ರಯಾಣಕ್ಕೆ ದಾರಿ ಮಾಡಿ ಕೊಡಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯವರು ಮಾಹಿತಿ ನೀಡಿದ್ದಾರೆ. * ಇದೀಗ ಈ 'ಇ-ಪಾಸ್ ಪೋರ್ಟ್ʼನಲ್ಲಿರುವ ಚಿಪ್ ಪಾಸ್ ಪೋರ್ಟ್ ಹೊಂದಿರುವವರ ಬಗೆಗಿನ ಮಾಹಿತಿಗಳಾದ ಬಯೋಮೆಟ್ರಿಕ್ ಡೇಟಾ, ಹೆಸರು ಹಾಗೂ ಇತರ ವಿಷಯಗಳನ್ನು ಸಂಗ್ರಹಿಸಲು ಎಂಬೆಡೆಡ್ ಮಾಡಲಾಗುತ್ತದೆ. ಮತ್ತೇ ಇದು ರೇಡಿಯೋ-ಆವರ್ತನ ಗುರುತಿನ ಮೂಲಕ ಅನಧಿಕೃತ ಡೇಟಾಗಳ ವರ್ಗಾವಣೆಗೆ ಪರವಾನಿಗೆಯನ್ನು ನೀಡದ ಹಾಗೆ ಭದ್ರತಾ ವೈಶಿಷ್ಟ್ಯಗಳನ್ನ ಒಳಗೊಂಡಿರುತ್ತದೆ ಎಂದಿದ್ದಾರೆ. * ಪ್ರಸ್ತುತ ಭಾರತ ಸರ್ಕಾರವು ಪ್ರಾಯೋಗಿಕ ಆಧಾರದ ಮೇರೆಗೆ ಸುಮಾರು 20,000 ಅಧಿಕೃತ ಹಾಗೂ ರಾಜತಾಂತ್ರಿಕ ಇ-ಪಾಸ್ ಪೋರ್ಟ್ʼಗಳನ್ನು ಎಲೆಕ್ಟ್ರಾನಿಕ್ ಮೈಕ್ರೋಪ್ರೊಸೆಸರ್ ಚಿಪ್ʼನೊಂದಿಗೆ ಬಿಡುಗಡೆ ಮಾಡಿದೆ. ಇದೀಗ ಈ ಎಲ್ಲ ಪಾಸ್ ಪೋರ್ಟ'ಗಳು ಯಶಸ್ವಿಯಾಗಿ ಕಾರ್ಯಾಚರಿಸಿವೆ, ಪ್ರಸ್ತುತ ಕೇಂದ್ರ ಸರ್ಕಾರವು ದೇಶದ ಎಲ್ಲಾ ನಾಗರಿಕರಿಗೆ 'ಇ-ಪಾಸ್ ಪೋರ್ಟ್'ಗಳನ್ನ ನೀಡುವ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ. ನಾಗರಿಕರಿಗೆ ನೀಡುವ ಈ ಪಾಸ್ ಪೋರ್ಟ್ʼಗಳನ್ನು ಕಿರುಪುಸ್ತಕಗಳಲ್ಲಿ ಮುದ್ರಣ ಮಾಡಿ ನೀಡಲಾಗುತ್ತದೆ ಎಂದಿದ್ದಾರೆ. * ಸದ್ಯ ಭಾರತದಲ್ಲಿ 555 ಪಾಸ್ ಪೋರ್ಟ್ ಕೇಂದ್ರಗಳ ಜಾಲವಿದೆ ಎಂಬ ಮಾಹಿತಿ ತಿಳಿದು ಬಂದಿದೆ, ಇವುಗಳಲ್ಲಿ 36 ಪಾಸ್ ಪೋರ್ಟ್ ಕಚೇರಿಗಳು ಒಳಗೊಂಡಿವೆ, ಈ ಕಚೇರಿಗಳು ಇ-ಪಾಸ್ ಪೋರ್ಟ್ʼಗಳ ಸೇವೆಯನ್ನ ಕಲ್ಪಿಸಲಿವೆ ಎಂದಿದ್ದಾರೆ. ಇದೀಗ ಕೇಂದ್ರ ಸರ್ಕಾರವು ನೀಡುವ ಈ ಎಲ್ಲಾ ಭಾರತೀಯ ಇ-ಪಾಸ್ ಪೋರ್ಟ್ʼಗಳು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿರುತ್ತವೆ, ಅಷ್ಟೇ ಅಲ್ಲದೇ ಈ ಪಾಸ್ ಪೋರ್ಟ್'ಗಳನ್ನೂ ನಾಶಪಡಿಸುವುದು ಅಥವಾ ಹ್ಯಾಕ್ ಮಾಡುವುದು ಕಷ್ಟ ಸಾಧ್ಯ ಎಂದಿದ್ದಾರೆ.