Job Description: * ಪ್ರಸ್ತುತ ನ್ಯೂಝಿಲ್ಯಾಂಡ್ ಕ್ರಿಕೆಟ್ ಆಟಗಾರ ರಾಸ್‌ ಟೇಲರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ. ಮುಂಬರುವ ತಿಂಗಳಿನಲ್ಲಿ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ ಆ ಪಂದ್ಯದಲ್ಲಿ ಇವರು ನ್ಯೂಝಿಲ್ಯಾಂಡ್‌'ನ ಡೇನಿಯಲ್ ವೆಟ್ಟೋರಿ ಅವರ 112 ಟೆಸ್ಟ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ, ಹಾಗೂ ಅದೇ ರಾಸ್‌ ಟೇಲರ್ ಅವರ ಕೊನೆಯ ಪಂದ್ಯವಾಗಿದೆ. * ರಾಸ್‌ ಟೇಲರ್ ಅವರು ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾರ್ಚ್ ತಿಂಗಳ ಅಂತ್ಯದಲ್ಲಿ ಹಾಗೂ ಏಪ್ರಿಲ್ ತಿಂಗಳ ಪ್ರಾರಂಭದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ನ್ಯೂಝಿಲ್ಯಾಂಡ್‌'ನಲ್ಲಿ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು ಆಡಲಿದ್ದಾರೆ, ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧದ 4ನೇ ಏಕದಿನ ಕ್ರಿಕೆಟ್‌ ಪಂದ್ಯವು ಅವರ ಕೊನೆಯ ಪಂದ್ಯವಾಗಲಿದೆ ಎಂದಿದ್ದಾರೆ. * ರಾಸ್ ಟೇಲರ್: ಅವರು 1984 ರ ಮಾರ್ಚ್. 08 ರಂದು ಜನಿಸಿದ್ದಾರೆ, ರಾಸ್ ಟೇಲರ್ ಅವರು ಅಂತರಾಷ್ಟ್ರೀಯ ಕ್ರಿಕೆಟಿಗ ಹಾಗೂ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಮಾಜಿ ನಾಯಕರಾಗಿದ್ದಾರೆ. ರಾಸ್ ಟೇಲರ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ವಿಧಗಳಲ್ಲಿ 100 ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟರ್ ಇವರಾಗಿದ್ದಾರೆ. ಇದೀಗ ರಾಸ್ ಟೇಲರ್ ಅವರು ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಸರಣಿಯ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವುದಾಗಿ ಘೋಷಣೆ ಮಾಡಿದ್ದಾರೆ.