Job Description: * ಪ್ರಸ್ತುತ ಬ್ರಿಕ್ಸ್ ಹೊಸ ಅಭಿವೃದ್ಧಿ ಬ್ಯಾಂಕ್ (BRICS New Development Bank (NDB)) ಈಜಿಪ್ಟ್'ನ್ನು ತನ್ನ ಬ್ಯಾಂಕ್'ನ ಹೊಸ ಸದಸ್ಯರನ್ನಾಗಿ ಸೇರಿಸುವದಾಗಿ ಘೋಷಣೆ ಮಾಡಿದೆ. * ಇದೀಗ ಈಜಿಪ್ಟ್, ಬಾಂಗ್ಲಾದೇಶ, UAE ಹಾಗೂ ದಕ್ಷಿಣ ಅಮೆರಿಕಾದ ದೇಶ ಉರುಗ್ವೆ, ನಂತರ NDB'ಗೆ ಸೇರಿರುವ 4ನೇ ಹೊಸ ಸದಸ್ಯ ಈಜಿಪ್ಟ್. ಇದೀಗ ಈಜಿಪ್ಟ್ ಸೇರ್ಪಡೆಯಿಂದಾಗಿ ಬ್ರಿಕ್ಸ್ ಬ್ಯಾಂಕ್‌'ನ ಜಾಗತಿಕ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ. * ಪ್ರಸ್ತುತ ಈಜಿಪ್ಟ್‌ ದೇಶಕ್ಕೆ ಇದೊಂದು ಹೊಸ ವೇದಿಕೆಯಾಗಲಿದೆ, ಹಾಗೂ NDB ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಬ್ರಿಕ್ಸ್ ದೇಶಗಳೊಂದಿಗೆ ಸಹಕಾರವನ್ನು ಉತ್ತೇಜಿಸಲು ಸಹಾಯವನ್ನು ಕಲ್ಪಿಸಲಾಗುತ್ತದೆ. * New Development Bank: ಈ NDB ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದೆ. ಈ ಬ್ಯಾಂಕ್'ನ್ನು 2014 ರಲ್ಲಿ ಬ್ರೆಜಿಲ್‌ನ ಫೋರ್ಟಲೆಜಾದಲ್ಲಿ ಜರುಗಿದ 6ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ದೇಶಗಳು ಜೊತೆಯಾಗಿ ಸ್ಥಾಪಿಸಿವೆ. ಹಾಗೂ ಇದನ್ನು ಅಧಿಕೃತವಾಗಿ 2015 ರ ಜೂಲೈ'ನಲ್ಲಿ ಆರಂಭಿಸಲಾಯಿತು, ಈ ಬ್ಯಾಂಕ್'ನ ಪ್ರಧಾನ ಕಛೇರಿಯು ಚೀನಾದ ಶಾಂಘೈನಲ್ಲಿದೆ. * ಈ ಹಿಂದೆ 2018 ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ NDB ವೀಕ್ಷಕ ಸ್ಥಾನಮಾನವನ್ನು ಪಡೆದುಕೊಂಡಿದೆ. * ಈ New Development Bank ಸ್ಥಾಪನೆಯಾದಾಗಿನಿಂದಲೂ, ಈ ಬ್ಯಾಂಕ್ ತನ್ನ ಸದಸ್ಯರಿಗೆ USD 30 ಶತಕೋಟಿ ಬಂಡವಾಳದ, ಶುದ್ಧ ಇಂಧನ, ನೀರು ಮತ್ತು ನೈರ್ಮಲ್ಯ, ಸಾರಿಗೆ, ಸಾಮಾಜಿಕ ಮೂಲಸೌಕರ್ಯ, ಡಿಜಿಟಲ್ ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ಹೀಗೆ ಇನ್ನು ಹಲವಾರು ಕ್ಷೇತ್ರಗಳನ್ನು ಒಳಗೊಂಡಿರುವ ಸರಿ ಸುಮಾರು 80 ಯೋಜನೆಗಳನ್ನು ಅನುಮೋದಿಸಿದೆ.