Job Description: * ಪ್ರಸ್ತುತ ಭಾರತದ INS ಕೇಸರಿ ನೌಕೆಯು ಆಫ್ರಿಕಾದ ಮೊಜಾಂಬಿಕ್‌ಗೆ 500 ಟನ್‌ ಆಹಾರವನ್ನು ಹೊತ್ತು ಸಾಗಿದೆ, ಇದೀಗ ಈ INS ಕೇಸರಿಯು ಆಫ್ರಿಕಾದಲ್ಲಿನ ಮಪುಟೋ ಬಂದರನ್ನು ತಲುಪಿದೆ. ಪ್ರಸ್ತುತ ಭಾರತವು ಮಿಷನ್‌ ಸಾಗರ್‌(ಸೆಕ್ಯುರಿಟಿ ಅಂಡ್‌ ಗ್ರೋತ್‌ ಟು ಆಲ್‌ ರೀಜನ್‌) ಭಾಗದ ಅಂಗವಾಗಿ ಆಹಾರ ಪದಾರ್ಥಗಳನ್ನೂ ರವಾನಿಸಲಾಗಿದೆ. * ಸದ್ಯ ಆಫ್ರಿಕಾದ ಮೊಜಾಂಬಿಕ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಮಸ್ಯೆಗಳು ಹೆಚ್ಚಾಗಿವೆ, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತವು INS ಕೇಸರಿಯ ಮೂಲಕ ಆಹಾರ ಪದಾರ್ಥಗಳನ್ನು ನೀಡಿದೆ, ಇದಷ್ಟೇ ಅಲ್ಲದೇ ಅಲ್ಲಿನ ಸಶಸ್ತ್ರ ಪಡೆಗಳ ಶಕ್ತಿಯನ್ನು ಬಲಪಡಿಸಲು ಭಾರತ ತಯಾರಿದೆ ಎಂದು ತಿಳಿಸಿದೆ, ಈ INS ಕೇಸರಿಯ ಮೂಲಕ ರವಾನಿಸಿರುವ ಆಹಾರ ಪದಾರ್ಥಗಳನ್ನು ಅಲ್ಲಿನ ಸೇನೆಗೆ ಹಸ್ತಾಂತರಿಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. * ಇದೇ ರೀತಿಯಲ್ಲಿ ಭಾರತದ INS ಕೇಸರಿಯು ಮಾಲ್ಡೀವ್ಸ್‌, ಮಾರಿಷಸ್‌, ಹಾಗೂ ಇನ್ನು ಅನೇಕ ರಾಷ್ಟ್ರಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡಿದೆ. * ಭಾರತೀಯ ನೌಕಾಪಡೆಯ ಈ ಹಡಗುಗಳಿಗೆ INS ಕೇಸರಿ ಎಂದು ಹೆಸರಿಸಲಾಗಿದೆ: - 1975 ರ INS ಕೇಸರಿಯು ಭಾರತೀಯ ನೌಕಾಪಡೆಯ ಕುಂಭೀರ್-ವರ್ಗದ ಟ್ಯಾಂಕ್ ಲ್ಯಾಂಡಿಂಗ್ ಹಡಗಾಗಿದೆ, ಈ ಹಡಗನ್ನು1999 ರಲ್ಲಿ ಸ್ಥಗಿತಗೊಳಿಸಲಾಗಿದೆ. - 2005 ರ INS ಕೇಸರಿಯು ಇದೊಂದು ಶಾರ್ದೂಲ್-ವರ್ಗದ ಉಭಯಚರ ಯುದ್ಧ ನೌಕೆಯಾಗಿದೆ, ಸದ್ಯ ಈ ನೌಕೆಯು ಸೇವೆಯಲ್ಲಿದೆ. * 2009 ರಲ್ಲಿ, INS ಕೇಸರಿಯನ್ನು ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌ನಿಂದ ಪೋರ್ಟ್ ಬ್ಲೇರ್‌ಗೆ ವರ್ಗಾವಣೆ ಮಾಡಲಾಗಿದೆ, ಈ ಹಡಗು 2014 ರ ಮಾರ್ಚ್ ನಲ್ಲಿ ಕಮಾಂಡರ್ ಮಹೇಶ್ ಮಂಗಿಪುಡಿ ಅವರ ಸಮ್ಮುಖದಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್ 370 (flight-370)ಗಾಗಿ ಹುಡುಕಾಟದ ಕಾರ್ಯಾಚರಣೆಯಲ್ಲಿ ತನ್ನನು ತೊಡಗಿಸಿಕೊಂಡಿತ್ತು.