Job Description: * 2021 ರ ಡಿಸೆಂಬರ್. 27 ರಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಮಂಡಿ ಪಟ್ಟಣದಲ್ಲಿ ಸುಮಾರು 28,197 ಕೋಟಿ ರೂ. ವೆಚ್ಚದ 287 ಹೂಡಿಕೆಗಳ ಯೋಜನೆಗಳನ್ನು ಅದರಲ್ಲಿ 11,000 ಕೋಟಿ ರೂ. ಮೌಲ್ಯದ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. * ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಮಾರು ಮೂರು ದಶಕಗಳಿಂದ ಬಾಕಿ ಉಳಿದುಕೊಂಡಿರುವ ರೇಣುಕಾಜಿ ಅಣೆಕಟ್ಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು, ಈ ಯೋಜನೆ ಕಾರ್ಯವನ್ನು ಸಾಧ್ಯಗೊಳಿಸಲು '6' ರಾಜ್ಯಗಳ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ,ಉತ್ತರಾಖಂಡ, ಹರಿಯಾಣ, ರಾಜಸ್ಥಾನ, ಹಾಗೂ ದೆಹಲಿಯನ್ನು ಕೇಂದ್ರ ಸರ್ಕಾರವು ಒಟ್ಟುಗೂಡಿಸಿದೆ, ಈ ಯೋಜನೆ ಅಡಿಯಲ್ಲಿ ಸುಮಾರು 7000 ಕೋಟಿ ರೂ. ವೆಚ್ಚದಲ್ಲಿ 40 ಮೆಗಾವ್ಯಾಟ್(MW) ವಿದ್ಯುತ್ ತಯಾರಾಗಲಿದೆ, ಅಷ್ಟೇ ಅಲ್ಲದೇ ವಾರ್ಷಿಕ ಸುಮಾರು 500 ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಪಡೆಯಲು ಸಾಧ್ಯವಾಗುತ್ತದೆ ಪ್ರಸ್ತುತ ಈ ಯೋಜನೆಯು ಹೆಚ್ಚಾಗಿ ದೆಹಲಿಗೆ ಬಹಳ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ. * ಪ್ರಧಾನ ಮೋದಿಯವರು ಲುಹ್ರಿ ಹಂತ 1 ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ, ಈ ಯೋಜನೆ 1800 ಕೋಟಿ ರೂ. ವೆಚ್ಚದಲ್ಲಿ 210 MW ವಿದ್ಯುತ್ ನಿರ್ಮಿಸಲಾಗುವುದು, ಇದರಿಂದಾಗಿ ವಾರ್ಷಿಕವಾಗಿ 750 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದಿದ್ದಾರೆ. * ಪ್ರಧಾನ ಮೋದಿ ಅವರು ಧೌಲಸಿದ್ ಜಲವಿದ್ಯುತ್ ಯೋಜನೆಗೂ ಕೂಡ ಶಂಕುಸ್ಥಾಪನೆ ನೆರವೇರಿಸಿದ್ದಾರೆ, ಈ ಯೋಜನೆಯು ಹಮೀರ್‌ ಪುರ ಜಿಲ್ಲೆಯ ಮೊದಲ ಜಲವಿದ್ಯುತ್ ಯೋಜನೆಯಾಗಿದೆ, ಈ ಯೋಜನೆ ಅಡಿ 66 MW ವಿದ್ಯುತ್, ಹಾಗೂ ವಾರ್ಷಿಕವಾಗಿ 300 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದಿದ್ದಾರೆ. * ಪ್ರಧಾನ ಮೋದಿ ಸಾವ್ರಾ-ಕುದ್ದು ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ, ಈ ಯೋಜನೆ ಅಡಿಯಲ್ಲಿ 111 MW ವಿದ್ಯುತ್ ನಿರ್ಮಾಣವಾಗಲಿದೆ, ವಾರ್ಷಿಕವಾಗಿ 380 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆಯಾಗಲಿದೆ ಎಂದಿದ್ದಾರೆ. * ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಒಂದೇ ದಿನದಲ್ಲಿ 11,000 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಇತಿಹಾಸದಲ್ಲಿ ಇದೇ ಮೊದಲು ಬಾರಿ ಎಂದಿದ್ದಾರೆ.