Job Description: * ಗ್ರೀಸ್ ದೇಶದ ಮಾಜಿ ಅಧ್ಯಕ್ಷರಾಗಿರುವ ಕಾರೊಲೊಸ್ ಪಪೌಲಿಯಾಸ್ ಅವರು ನಿಧನರಾಗಿದ್ದಾರೆ ಎಂದು ಗ್ರೀಸ್ನ ದೇಶದ ಸರ್ಕಾರವು ತಿಳಿಸಿದೆ. * ಕಾರೊಲೊಸ್ ಪಪೌಲಿಯಾಸ್ ಅವರು 2 ಅವಧಿಗೆ ಅಂದರೆ 2005 ರಿಂದ 2015 ರ ನಡುವೆ ಗ್ರೀಸ್ನ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. * ಈ ಹಿಂದೆ 1967-74 ರ ಸಮಯದಲ್ಲಿ ಅಲ್ಲಿನ ಸೇನೆಯು ದೇಶದ ಆಡಳಿತವನ್ನು ವಶಪಡಿಸಿಕೊಂಡಾಗ, ಹಾಗೂ 2 ನೇ ವಿಶ್ವಯುದ್ಧದಲ್ಲಿ ಸಂಧರ್ಭಗಳಲ್ಲಿ ನಾಝಿಗಳು ಗ್ರೀಸ್ನ ಮೇಲೆ ದಾಳಿ ಮಾಡಿದಾಗ ಅವರನ್ನು ವಿರೋಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು, ಅಷ್ಟೇ ಅಲ್ಲದೇ ಈ ಹಿಂದೆ ಇವರು 1985-89 ಮತ್ತು 1993-96 ರಲ್ಲಿ ಗ್ರೀಸ್ ದೇಶದ ವಿದೇಶ ವ್ಯವಹಾರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. * ಪ್ರಸ್ತುತ ಗ್ರೀಸ್ನ ದೇಶದ ಅಧ್ಯಕ್ಷೆ ಕ್ಯಾಥರೀನಾ ಸಕೆರ್ಲಾಪೊಲೊ ಅವರು ಕಾರೊಲೊಸ್ ಪಪೌಲಿಯಾಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. * ಗ್ರೀಸ್: ಇದೊಂದು ಆಗ್ನೇಯ ಯುರೋಪಿನಲ್ಲಿ ಏಜಿಯನ್ ಮತ್ತು ಅಯೋನಿಯನ್ ಸಮುದ್ರಗಳಾದ್ಯಂತ ಸಾವಿರಾರು ದ್ವೀಪಗಳನ್ನು ಹೊಂದಿರುವ ದೇಶವಾಗಿದೆ. ಸಾಮಾನ್ಯವಾಗಿ ಈ ದೇಶವನ್ನು ಪಾಶ್ಚಿಮಾತ್ಯ ನಾಗರಿಕತೆಯ ತೊಟ್ಟಿಲು ಎಂದು ಕರೆಯುತ್ತಾರೆ. ಅಥೆನ್ಸ್ ನಗರವು ಗ್ರೀಸ್ ದೇಶದ ರಾಜಧಾನಿಯಾಗಿದೆ, ಈ ದೇಶವು 5 ನೇ ಶತಮಾನದ ಹೆಗ್ಗುರುತುಗಳನ್ನು ಉಳಿಸಿಕೊಂಡಿದೆ, ಹಾಗೂ ಗ್ರೀಸ್ ದೇಶವು ಕಡಲತೀರಗಳಿಗೆ ಉತ್ತಮ ಹೆಸರುವಾಸಿಯಾಗಿದೆ.