Job Description: * ಇದೀಗ ದೆಹಲಿ ಸರ್ಕಾರವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನಗಳ ಮೇರೆಗೆ 2022 ರ ಜನೇವರಿ. 01 ರಂದು 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಲಾಗುತ್ತದೆ, ಹಾಗೂ ಅವುಗಳಿಗೆ ನಿರಾಕ್ಷೇಪಣೆ ಪ್ರಮಾಣ(NOC)ಪತ್ರವನ್ನು ನೀಡಲಿದೆ ಎಂದಿದ್ದಾರೆ. ಇದಾದ ಬಳಿಕ 15 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಪೂರೈಸಿರುವ ಡೀಸೆಲ್ ವಾಹನಗಳಿಗೆ ಯಾವುದೇ NOC ನೀಡಲಾಗುವುದಿಲ್ಲ ಎಂದು ದೆಹಲಿ ಸಾರಿಗೆ ಇಲಾಖೆಯು ತಿಳಿಸಿದೆ. * ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 10 ವರ್ಷಗಳ ಹಳೆಯ ಡೀಸೆಲ್ ವಾಹನಗಳು, ಹಾಗೂ 15 ವರ್ಷಗಳ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿ ಹಾಗೂ ಓಡಾಟದ ಮೇಲಿನ ನಿರ್ಬಂಧಗಳಿಗೆ ನಿರ್ದೇಶನಗಳನ್ನು ನೀಡಿದೆ. * ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯು 2016 ರ ಜುಲೈ ನಲ್ಲಿ ನೀಡಿದ ಆದೇಶದಲ್ಲಿ ನೀಡಿರುವಂತೆ, 10 ವರ್ಷಕ್ಕೂ ಹಳೆಯದಾಗಿರುವ ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸುವ ನಿರ್ದೇಶನವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದೆ. * ಇದೀಗ ದೆಹಲಿ ಸಾರಿಗೆ ಇಲಾಖೆ ಇಲಾಖೆಯು 10 ವರ್ಷಗಳನ್ನು ಪೂರ್ಣಗೊಳಿಸಿದ ಎಲ್ಲಾ ಡೀಸೆಲ್ ವಾಹನಗಳ ನೋಂದಣಿಯನ್ನು 2022 ರ ಜನವರಿ 1 ರಂದು ರದ್ದುಪಡಿಸುತ್ತಿದೆ ಆದೇಶ ಹೊರಡಿಸಿದೆ. * ರಾಷ್ಟ್ರೀಯ ಹಸಿರು ನ್ಯಾಯಮಂಡಳಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯು 2010 ಭಾರತದ ಸಂಸತ್ತಿನ ಕಾಯಿದೆಯಾಗಿದೆ, ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಲೇವಾರಿಯನ್ನು ನಿರ್ವಹಿಸಲು ಈ ನ್ಯಾಯಮಂಡಳಿಯ ರಚಿಸಲಾಗಿದೆ, ಇದು ಭಾರತದ ಸಾಂವಿಧಾನಿಕ ನಿಬಂಧನೆಗಳ 21 ನೇ ವಿಧಿ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯಿಂದ ಸ್ಫೂರ್ತಿ ಪಡೆದಿದೆ, ಅಷ್ಟೇ ಅಲ್ಲದೇ ಈ ಮಂಡಳಿಯು ಭಾರತದ ನಾಗರಿಕರಿಗೆ ಆರೋಗ್ಯಕರ ಪರಿಸರದ ಹಕ್ಕನ್ನು ಖಾತರಿಪಡಿಸುತ್ತದೆ. * ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT): ನವದೆಹಲಿಯು ಟ್ರಿಬ್ಯೂನಲ್‌ನ ಪ್ರಧಾನ ಕುಳಿತುಕೊಳ್ಳುವ ಸ್ಥಳವಾಗಿದೆ, ಹಾಗೂ ಭೋಪಾಲ್, ಪುಣೆ, ಕೋಲ್ಕತ್ತಾ, ಚೆನ್ನೈ ಇವುಗಳು ನ್ಯಾಯಮಂಡಳಿಯ ಇತರ ಆಸನದ ಸ್ಥಳವಾಗಿದೆ.