Job Description: * ಪ್ರಸ್ತುತ ಕಾನೂನಿನ ಅನ್ವಯ ಯುವತಿಯರು ಮದುವೆ ವಯಸ್ಸು ಕನಿಷ್ಠ 18 ಆಗಿರಬೇಕಿತ್ತು, ಆದರೆ ಇದೀಗ ಅದನ್ನು 21 ಕ್ಕೆ ಏರಿಕೆ ಮಾಡಲಾಗಿದೆ. ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ, ಅಷ್ಟೇ ಅಲ್ಲದೇ ಅತೀ ಶೀಘ್ರವೇ ಕಾನೂನು ರೂಪದಲ್ಲಿ ಜಾರಿಗೆಯಾಗಲಿದೆ ಎಂದು ಸಂಪುಟ ತಿಳಿಸಿದೆ.* ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪವನ್ನಿಟ್ಟಿದ್ದರು. ಇದೀಗ ದೇಶದಲ್ಲಿನ ಬಾಣಂತಿ-ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ, ಹಾಗೂ ಪೌಷ್ಟಿಕಾಂಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಹಿಳೆಯರ ಮದುವೆ ವಯಸ್ಸನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದ್ದರು.* ಕೇಂದ್ರವು ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಕೆ ಮಾಡಿದರೆ, ಅದರಿಂದ ಆಗುವ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರವು ಕಾರ್ಯಪಡೆ ಸಿದ್ಧಪಡಿಸಿತ್ತು, ಇದರ ನೇತೃತ್ವವನ್ನು ಸಮತಾ ಪಕ್ಷದ ಮಾಜಿ ಸದಸ್ಯೆ ಜಯಾ ಜೇಟ್ಲಿ ಅವರು ವಹಿಸಿಕೊಂಡಿದ್ದರು. ಕೇಂದ್ರ ರಚಿಸಿರುವ ಕಾರ್ಯಪಡೆಯು ಕೆಲ ತಜ್ಞರ ಜೊತೆ ಹಾಗೂ ಯುವ ವಯಸ್ಸಿನ ಮಹಿಳೆಯರ ಜೊತೆಗೆ ಆಳವಾಗಿ ಚರ್ಚಿಸಿ ತದನಂತರ ಮದುವೆ ವಯಸ್ಸಿನ ಮಿತಿ ಏರಿಕೆಗೆ ಶಿಫಾರಸ್ತು ಮಾಡಿದೆ.* ಈ ಶಿಫಾರಸ್ತಿನ ಮೇರೆಗೆ ಕೇಂದ್ರ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ಹಾಗೂ ವಿಶೇಷ ವಿವಾಹ ಕಾಯ್ದೆ & 1955 ರ ಹಿಂದೂ ವಿವಾಹ ಕಾಯ್ದೆಯ ವೈಯಕ್ತಿಕ ಕಾನೂನುಗಳನ್ನೂ ತಿದ್ದುಪಡಿ ಮಾಡಲಾಗುತ್ತದೆ ಎಂದು ತಿಳಿಸಿದೆ.* ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಈ ಹಿಂದೆ 1949 ರಲ್ಲಿ 15 ಕ್ಕೆ ಏರಿಕೆ ಮಾಡಲಾಗಿತ್ತು, ಇದಾದ ಬಳಿಕ ಮತ್ತೇ 1978 ರಲ್ಲಿ 18 ಕ್ಕೆ ಏರಿಕೆ ಮಾಡಲಾಯಿತು, ಇದೀಗ ಕೇಂದ್ರವು ಸರಿ ಸುಮಾರು 43 ವರ್ಷಗಳ ಬಳಿಕ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಏರಿಸಲು ಅನುಮೋದನೆ ನೀಡಿದೆ.