Job Description: * ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಬನಶಂಕರಿ ಚಿತಗಾರದಲ್ಲಿ ಜರುಗಿದೆ. * ಹಿರಿಯ ನಟ ಶಿವರಾಂ ಅವರು ಅಯ್ಯಪ್ಪ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟು ಬಿದ್ದಿರುವದರಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕವನ್ನು ತ್ಯಜಿಸಿದ್ದಾರೆ. * ಎಸ್. ಶಿವರಾಮ್ ಅವರು 1938 ರ ಜನೇವರಿ. 28 ರಂದು ಜನಿಸಿದ್ದರು. ಹಾಗೂ 2021 ರ ಡಿಸೆಂಬರ್. 4 ರಂದು ಇಹಲೋಕವನ್ನು ತ್ಯಜಿಸಿದ್ದಾರೆ. * ಹಿರಿಯ ನಟ ಶಿವರಾಮ್ ಅವರು ಭಾರತೀಯ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ, ಅವರು ಸುಮಾರು '6' ದಶಕಗಳನ್ನು ಕನ್ನಡ ಸಿನಿಮಾ ವೃತ್ತಿಜೀವನದಲ್ಲಿ ಕಳೆದಿದ್ದಾರೆ, ಅಷ್ಟೇ ಅಲ್ಲದೇ ಇವರು ಪುಟ್ಟಣ್ಣ ಕಣಗಾಲ್ಅವರ ನಿರ್ದೇಶನದಲ್ಲಿ, ಡಾ. ರಾಜ್ಕುಮಾರ್, ಹಾಗೂ ರಜನಿಕಾಂತ್ ಅವರ ಜೊತೆ ನಟಿಸಿದ್ದಾರೆ.