Job Description: * ಪ್ರಸ್ತುತ ಐಟಿಎಫ್ ಮಹಿಳೆಯರ ವಿಶ್ವ ಟೆನಿಸ್ ಟೂರ್ ಚಾಂಪಿಯನ್ಷಿಪ್ ನಲ್ಲಿ ಹೈದರಾಬಾದ್ ನ ಪ್ರಾಂಜಲ ಯಡ್ಲಪಲ್ಲಿ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ. * ಇತ್ತೀಚಿಗಷ್ಟೇ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಡಿಯಲ್ಲಿ ಜರುಗಿರುವ ಚಾಂಪಿಯನ್ಷಿಪ್'ನ ಮಹಿಳಾ ಸಿಂಗಲ್ಸ್ ಫೈನಲ್'ನಲ್ಲಿ ಹೈದರಾಬಾದ್'ನ ಸೌಜನ್ಯ ಬಾವಿಸೆಟ್ಟಿ ಅವರನ್ನು ಎದುರಿಸಿದರು. * ಹೈದರಾಬಾದ್ ನ ಪ್ರಾಂಜಲ ಯಡ್ಲಪಲ್ಲಿ ಅವರು 7-5, ಹಾಗೂ 6-2 ರ ಅಂತರದಿಂದ ಜಯಿಸಿದ್ದಾರೆ, ಈ ಪ್ರಶಸ್ತಿಯು ಇವರ ವೃತ್ತಿಜೀವನದ 4 ನೇ ಐಟಿಎಫ್ ಕಿರೀಟವಾಗಿದೆ. * ಪ್ರಾಂಜಲ ಯಡ್ಲಪಲ್ಲಿ ಅವರು ಪ್ರಶಸ್ತಿ ಹಾಗೂ 1 ಲಕ್ಷ 70 ಸಾವಿರ ರೂ. ಬಹುಮಾನವನ್ನು ಸ್ವೀಕರಿಸಿದರು, ಅದರೊಂದಿಗೆ 10 ವಿಶ್ವ ರ್ಯಾಂಕಿಂಗ್ ಪಾಯಿಂಟ್ಸ್ ಗಳನ್ನೂ ಗಳಿಸಿದ್ದಾರೆ. * ಹೈದರಾಬಾದ್'ನ ಮತ್ತೊಬ್ಬ ಆಟಗಾರ್ತಿ ಸೌಜನ್ಯ ಬಾವಿಸೆಟ್ಟಿ 1 ಲಕ್ಷ 10 ಸಾವಿರ ರೂ. ಬಹುಮಾನವನ್ನು ಪಡೆದುಕೊಂಡಿದ್ದಾರೆ. * ಮಹಾರಾಷ್ಟ್ರದ ಋತುಜಾ ಭೋಸಲೆ ಜೊತೆಗೂಡಿ ಸೌಜನ್ಯ ಬಾವಿಸೆಟ್ಟಿ ಅವರು ಡಬಲ್ಸ್ನಲ್ಲಿ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ.