Job Description: * ಈ ಹಿಂದೆ ಕೋವಿಡ್-19 2ನೇ ಅಲೆ ಸಂದರ್ಭದಲ್ಲಿ ಪಂಜಾಬ್ ರಾಜ್ಯದಲ್ಲಿ ಆಕ್ಸಿಜನ್(ಆಮ್ಲಜನಕ) ಕೊರತೆಯಿಂದ '04' ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇವಲ ಪಂಜಾಬ್ ರಾಜ್ಯವು ಮಾತ್ರ ಮಾಹಿತಿ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ಸಂಸತ್ತಿಗೆ ವರದಿ ಮಾಡಿದ್ದಾರೆ. * ಕೇಂದ್ರ ಸರ್ಕಾರವು ಜುಲೈ 26ರಿಂದ 30ರ ಮಧ್ಯೆ ಕೋವಿಡ್-19 ನಿಂದಾದ ಸಾವುಗಳ ಅಂಕಿಸಂಖ್ಯೆ ತಿಳಿಸಿ ಎಂದು ರಾಜ್ಯಗಳಿಗೆ ಸುಮಾರು '03' ಬಾರಿ ಪತ್ರವನ್ನು ಬರೆದಿದೆ, ಇದಕ್ಕೆ ಉತ್ತರವಾಗಿ ಆಗಸ್ಟ್. 21ರಂದು ಅಂಡಮಾನ್ ನಿಕೋಬಾರ್ ಆಡಳಿತ, ದಾದ್ರಾ ನಗರ್ ಹವೇಲಿ, ದಿಯು, ದಮನ್, ಆಡಳಿತ ಪ್ರದೇಶಗಳು, ಹಾಗೂ ಉತ್ತರಪ್ರದೇಶ, ತೆಲಂಗಾಣ, ಅಸ್ಸಾಂ, ಪಂಜಾಬ್, ಜಮ್ಮುಕಾಶ್ಮೀರ. ಲಡಾಖ್, ಪಶ್ಚಿಮ ಬಂಗಾಳ, ಪುದುಚ್ಚೇರಿ, ಅರುಣಾಚಲ ಪ್ರದೇಶ, ಉತ್ತರಾಖಂಡ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಪ್ರತಿಕ್ರಿಯಿ ನೀಡಿದ್ದವು, ಇದೇ ಸಂಧರ್ಭದಲ್ಲಿ ಪಂಜಾಬ್ ರಾಜ್ಯ ಮಾತ್ರವೇ ಅಮೃತಸರ್ ಜಿಲ್ಲೆಯ ಒಂದು ಆಸ್ಪತ್ರೆಯಲ್ಲಿ 04 ಸಾವುಗಳು ಆಕ್ಸಿಜನ್ ಕೊರತೆಯಿಂದ ಸಂಭವಿಸಿವೆ ಎಂದು ಲಿಖಿತ ರೂಪದಲ್ಲಿ ತಿಳಿಸಿದೆ. * ಇದೆಲ್ಲರದ ನಡುವೆ ದೆಹಲಿಯ ಬಾತ್ರ ಆಸ್ಪತ್ರೆಯಲ್ಲಿ ಕನಿಷ್ಠ 12 ರೋಗಿಗಳು, ಮತ್ತು ಜೈಪುರ್ ಗೋಲ್ಡನ್ ಹಾಸ್ಪಿಟಲ್ನಲ್ಲಿ ಎಪ್ರಿಲ್. 23 ರಂದು ಸುಮಾರು 20 ಮಂದಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು, ಇದರ ನಡುವೆ ಉತ್ತರ ಪ್ರದೇಶದ ಆಗ್ರಾದ ಖಾಸಗಿ ಆಸ್ಪತ್ರೆಯಲಿ ಕಾರ್ಯಾಚರಣೆ ವೇಳೆಯಲ್ಲಿ ಆಕ್ಸಿಜನ್ ಪೂರೈಕೆ ನಿಲ್ಲಿಸಿದ ಪರಿಣಾಮ ಕೆಲ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು, ಹಾಗೂ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ. 2 ರಂದು ಆಕ್ಸಿಜನ್ ಕೊರತೆಯಿಂದ 24 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು ಎಂದು ತಿಳಿಸಿದ್ದಾರೆ.