Job Description: * ಪ್ರಸ್ತುತ ಚೀನಾದೇಶವು ಬೆಲ್ಟ್ ಆಯಂಡ್ ರೋಡ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ ಲಾವೋಸ್ ದೇಶಕ್ಕೆ ತನ್ನ ದೇಶದ ಮೊದಲ ಅಂತರರಾಷ್ಟ್ರೀಯ ರೈಲನ್ನು ಆರಂಭಿಸಿದೆ. * ಲಾವೋಸ್ ಇದೊಂದು ಆಗ್ನೇಯ ಏಷ್ಯಾದ ದೇಶವಾಗಿದೆ, ಮೆಕಾಂಗ್ ನದಿಯಿಂದ ಈ ದೇಶ ಹಾದುಹೋಗುತ್ತದೆ, ಈ ದೇಶವು ಪರ್ವತ ಭೂಪ್ರದೇಶ, ಫ್ರೆಂಚ್ ವಸಾಹತುಶಾಹಿ ವಾಸ್ತುಶಿಲ್ಪ, ಬೆಟ್ಟದ ಬುಡಕಟ್ಟು ವಸಾಹತುಗಳು ಹಾಗೂ ಬೌದ್ಧ ಮಠಗಳಿಗೆ ಹೆಸರುವಾಸಿಯಾಗಿದೆ. ರಾಜಧಾನಿಯಾದ * ವಿಯೆಂಟಿಯಾನ್ ಇದು ಲಾವೋಸ್ ದೇಶದ ರಾಜಧಾನಿಯಾಗಿದೆ, ಈ ರಾಜಧಾನಿ ದಟ್ ಲುವಾಂಗ್ ಸ್ಮಾರಕದ ಸ್ಥಳವಾಗಿದೆ, ಅಷ್ಟೇ ಅಲ್ಲದೇ ಆ ದೇಶದಲ್ಲಿನ ಒಂದು ಸ್ಮಾರಕವು ಬುದ್ಧನ ಎದೆಯ ಮೂಳೆಯನ್ನು ಹೊಂದಿದೆ ಎಂದು ವರದಿಯಾಗಿದೆ. * ಆಗ್ನೇಯ ಏಷ್ಯಾದ ಲಾವೋಸ್ ಎಂಬ ಈ ಸಣ್ಣ ದೇಶಕ್ಕೆ, ಪ್ರಾದೇಶಿಕ ಸಂಪರ್ಕ ಹೊಂದಿದ ಕೇಂದ್ರವನ್ನಾಗಿ ಪರಿವರ್ತಿಸಲು ಈ ರೈಲು ಸಂಚಾರ ಸಹಾಯವಾಗಲಿದೆ ಎಂದು ಚೀನಾ ತಿಳಿಸಿದೆ. * ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಲಾವೋಸ್ನ ಥೋಂಗ್ಲೌನ್ ಸಿಸೌಲಿತ್ ಅವರು ಜೊತೆಯಾಗಿ ವರ್ಚುಲ್ ಸಭೆಯ ಮೂಲಕ ಚೀನಾ-ಲಾವೋಸ್ ರೈಲು ಮಾರ್ಗದ ಉದ್ಘಾಟನೆಯನ್ನು ನೆರವೇರಿಸಿದರು. * ಚೀನಾ-ಲಾವೋಸ್ ರೈಲು ಮಾರ್ಗವು 1,035 ಕಿ.ಮೀ. ಉದ್ದದ ರೈಲು ಮಾರ್ಗವನ್ನು ಹೊಂದಿದೆ, ಈ ರೈಲು ಚೀನಾದ ಯುನಾನ್ ಪ್ರಾಂತ್ಯದಿಂದ ವಿಯೆಂಟಿಯಾನ್ ಪ್ರಾಂತ್ಯಕ್ಕೆ 10 ಗಂಟೆಯ ಸಮಯದಲ್ಲಿ ತಲುಪುತ್ತದೆ ಎಂದು ಚೀನಾ ಸುದ್ದಿವಾಹಿನಿ ಮಾಹಿತಿ ನೀಡಿದೆ. * ಪ್ರಸ್ತುತ ಲಾವೋಸ್ ದೇಶವು ಚೀನಾ, ವಿಯೆಟ್ನಾಂ, ಥಾಯ್ಲೆಂಡ್, ಮ್ಯಾನ್ಮಾರ್ ಹಾಗೂ ಕಾಂಬೋಡಿಯಾ ದೇಶಗಳ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ.