Job Description: * ಪ್ರಸ್ತುತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿನ ಹಿಂದೂ ಸಂತ ಸದ್ಗುರು ಸಂತ ಶಾದರಾಮ್ ಸಾಹಿಬ್ ಜನ್ಮ ವಾರ್ಷಿಕೋತ್ಸವ ಆಚರಣೆ ಹಿನ್ನಲೆಯಿಂದಾಗಿ ಪಾಕಿಸ್ತಾನಕ್ಕೆ ಭೇಟಿನೀಡಲು 130 ಕ್ಕೂ ಹೆಚ್ಚು ಭಾರತೀಯರಿಗೆ ವೀಸಾಗಳನ್ನು ನೀಡಿದ ಪಾಕಿಸ್ತಾನ ಎಂದು ಭಾರತದ ಹೈಕಮಿಷನ್ ಮಾಹಿತಿ ನೀಡಿದೆ. * ಪ್ರಸ್ತುತ ಸಿಂಧ್ನ ಶದಾನಿ ದರ್ಬಾರ್ ಹಯಾತ್ ಪಿತಾಫಿಯಲ್ಲಿ ಶಿವ ಅವತಾರಿ ಸದ್ಗುರು ಸಂತ ಷಾದರಾಮ್ ಸಾಹಿಬ್ ಅವರ 313 ನೇ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವ ಯಾತ್ರಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಲು ಡಿಸೆಂಬರ್ 4 ರಿಂದ 15ರವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ 1974 ರ ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡುವ ದ್ವಿಪಕ್ಷೀಯ ಪ್ರೋಟೋಕಾಲ್ ಅಡಿಯಲ್ಲಿ ಪ್ರತಿ ವರ್ಷ ಧಾರ್ಮಿಕ ಉತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾರತದಿಂದ ಸಿಖ್ ಮತ್ತು ಹಿಂದೂ ಯಾತ್ರಿಕರು ಪಾಕಿಸ್ತಾನಕ್ಕೆ ಪ್ರಯಾಣ ಬೆಳಸುತ್ತಾರೆ.