Job Description: * ಪ್ರಸ್ತುತ ಇಂಡಿಯಾ ಫ್ಯಾಶನ್ ಪ್ರಶಸ್ತಿಯಲ್ಲಿ ಅತ್ಯಂತ ಸೊಗಸಾದ ರಾಜಕಾರಣಿ (Most Stylish Politician) ಎಂಬ ಪ್ರಶಸ್ತಿಯನ್ನು (AAP) ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾರವರು ಪದುಕೊಂಡಿದ್ದಾರೆ. * 33 ವರ್ಷ ವರ್ಷದ ರಾಘವ್ ಚಡ್ಡಾ ಅವರು AAP ಯಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ, ಇದೀಗ ಇವರಿಗೆ ಅತ್ಯಂತ ಸೊಗಸಾದ ರಾಜಕಾರಣಿ (Most Stylish Politician) ಎಂಬ ಪ್ರಶಸ್ತಿಯು ಲಭಿಸಿದೆ, ಈ ಮಾಹಿತಿಯನ್ನು ರಾಘವ್ ಚಡ್ಡಾ ಅವರು ನನಗೆ ಇಂಡಿಯನ್ ಫ್ಯಾಶನ್ ಅವಾರ್ಡ್ಸ್ 2021 ರಲ್ಲಿ ಅತ್ಯಂತ ಸೊಗಸಾದ ರಾಜಕಾರಣಿ ಎಂಬ ಪ್ರಶಸ್ತಿ ಲಭಿಸಿದೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. * ಪ್ರಸ್ತುತ ರಾಘವ್ ಚಡ್ಡಾ ಅವರು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರು, ಹಾಗೂ ದೆಹಲಿಯ ರಾಜಿಂದರ್ ನಗರದ ಶಾಸಕರಾಗಿದ್ದಾರೆ.