Job Description: * ಪ್ರಸ್ತುತ ಚೀನಾ ದೇಶವು ತೈವಾನ್ ವಿರುದ್ಧ ತನ್ನ ಬಲಪ್ರದರ್ಶನಕ್ಕೆ ಮತ್ತೊಮ್ಮೆ ಮುಂದಾಗಿದೆ, ಇದೀಗ ಚೀನಾದ 27 ಯುದ್ದ ವಿಮಾನಗಳು ತೈವಾನ್ ಬಫರ್ ಝೋನ್ ವಾಯುಪ್ರದೇಶಕ್ಕೆ ಬಂದಿವೆ ಎಂದು ತಿಳಿದು ಬಂದಿದೆ. * ಪ್ರಸ್ತುತ ತೈವಾನ್ ರಕ್ಷಣಾ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಚೀನಾದ 27 ವಿಮಾನಗಳು ತೈವಾನ್'ನ ಬಫರ್ ವಲಯವನ್ನು ಪ್ರವೇಶಿಸಿವೆ ಎಂದು ತಿಳಿಸಿದೆ, ಇದರ ವಿರುದ್ಧವಾಗಿ ತೈವಾನ್'ನ (ನಮ್ಮ) ಯುದ್ಧ ವಿಮಾನಗಳು ಅವುಗಳಿಗೆ ಎಚ್ಚರಿಕೆಯನ್ನು ನೀಡಿವೆ, ಇದರಿಂದಾಗಿ ಚೀನಾದ ಯುದ್ಧ ವಿಮಾನಗಳು ಪೆಸಿಫಿಕ್ ಸಾಗರದ ಮೂಲಕ ಹಿಂದೆ ಸರಿದಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. * ಚೀನಾ ಸುಮಾರು 1 ವರ್ಷದಿಂದ ತೈವಾನ್ ಪ್ರದೇಶದ ಮೇಲೆ ತನ್ನ ಪ್ರಾಬಲ್ಯವನ್ನು ಮೆರೆಯಲು ಪ್ರಯತ್ನ ಪಡುತ್ತಿದೆ, ಕಳೆದ 4 ದಿನಗಳಿಂದ 150 ಕ್ಕೂ ಹೆಚ್ಚು ಯುದ್ಧ ವಿಮಾನಗಳು ತೈವಾನ್ ಮೇಲೆ ಹಾರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ತೈವಾನ್ ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವಾಗಿದೆ ಹಾಗೂ ಆ ದೇಶವನ್ನು ಸಂಪೂರ್ಣವಾಗಿ ಚೀನಾ ತನ್ನ ವಶಕ್ಕೆ ಪಡೆಯಲಾಗುತ್ತದೆ ಎಂದು ಚೀನಾ ಹೇಳಿಕೆಯನ್ನು ನೀಡುತ್ತಿದೆ.