Job Description: * ಒಡಿಶಾದ ಸುಂದರಗಡ ಜಿಲ್ಲೆಯ ಆಶಾ ಕಾರ್ಯಕರ್ತೆ ಮತಿಲ್ಡಾ ಕುಲ್ಲು ಅವರು ಫೋರ್ಬ್ಸ್ ಡಬ್ಲ್ಯೂ - ಪವರ್ 2021 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. * ನಟಿಯರಾದ ಸಾನ್ಯಾ ಮಲ್ಲ್ಹೋತ್ರಾ ಮತ್ತು ರಸಿಕಾ ದುಗ್ಗಲ್ ಅವರು ಕೂಡಾ ಫೋರ್ಬ್ಸ್ ಮಹಿಳಾ ಸಾಧಕಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, * ಕೋವಿಡ್ ಯೋಧೆಯಾಗಿರುವ ಮತಿಲ್ಡಾ ಅವರು ಕಳೆದ 15 ವರ್ಷಗಳಿಂದಲೂ ಸುಂದರಗಡ ಜಿಲ್ಲೆಯ ಬಾರಗಾಂವ್ ತಾಲೂಕಿನ ಗರ್ಗದಬಹಾಲ್ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ಬೆಳಗ್ಗೆ ಸೂರ್ಯೋದಯದ ಮುಂಚೆ ಅಂದರೆ 5 ಗಂಟೆಗೆ ಏಳುವ ಮತಿಲ್ಡಾ ಅವರು ತಮ್ಮ ಮನೆಗೆಲಸಗಳನ್ನು ಪೂರೈಸಿಕೊಂಡು, ನಾಲ್ವರ ಕುಟುಂಬಕ್ಕೆ ತಿಂಡಿಯನ್ನು ಸಿದ್ದಗೊಳಿಸಿ, ಜಾನುವಾರಗಳಿಗೆ ಮೇವುಣಿಸಿದ ಬಳಿಕ ತನ್ನ ಸೈಕಲ್ ನಲ್ಲಿ ಊರಿನ ಮನೆ ಮನೆಗೆ ಭೇಟಿಯನ್ನು ಆರಂಭಿಸುತ್ತಾರೆ ಎಂದು ಫೋರ್ಬ್ಸ್ ತನ್ನ ವರದಿಯಲ್ಲಿ ತಿಳಿಸಿದೆ. * 'ಜನರಿಗಾಗಿ ವಿಶೇಷವಾಗಿ ನಮ್ಮ ಗ್ರಾಮದ ಜನರಿಗಾಗಿ ದುಡಿಯುವದು ನನಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಇಂದು ಫೋರ್ಬ್ಸ್ ನನ್ನನ್ನು ಗುರುತಿಸಿರುವುದು ನನಗೆ ಹೆಮ್ಮೆಯನ್ನು ಉಂಟು ಮಾಡಿದೆ' ಎಂದು ಮತಿಲ್ಡಾ ಅವರು ಹೇಳಿದರು.