Job Description: * ಸ್ವತಃ ಸೈಕಲಿನಲ್ಲಿ ಆಸ್ಪತ್ರೆಗೆ ತೆರಳಿ ನಂತರ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲ್ಯಾಂಡ್ ಸಂಸದೆ ಜೂಲಿ ಅನೀ ಗೆಂಟರ್. * ತುಂಬು ಗರ್ಭಿಣಿ ಜೂಲಿ ಮನೆಯಲ್ಲಿದ್ದಾಗ ಪ್ರಸವ ವೇದನೆ ಶುರುವಾಗಿತ್ತು. ಮದ್ಯ ರಾತ್ರಿ ಕಳೆದು ಸುಮಾರು ಎರಡು ಗಂಟೆ ಹೊತ್ತಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸಂಸದೆ ಜೂಲಿ ಅನೀ ಗೆಂಟರ್ ಸ್ವತಃ ಸೈಕಲಿನಲ್ಲಿ ಒಬ್ಬರೇ ಆಸ್ಪತ್ರೆಗೆ ತೆರಳಿ ಒಂದು ಗಂಟೆಯ ನಂತರ ಮಗುವನ್ನು ಹೆತ್ತರು ಎಂದು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. * 'ವಾಸ್ತವವಾಗಿ ಹೆರಿಗೆ ನೋವಿನಲ್ಲಿದ್ದ ನನಗೆ ಬೈಕ್ ನಲ್ಲಿ ಹೋಗುವ ಉದ್ದೇಶವಿರಲಿಲ್ಲ. ಆದ್ರೆ ಅಂತಿಮವಾಗಿ ಅದು ನಡೆದೇ ಹೋಯಿತು' ಎಂದು ನ್ಯೂಜಿಲ್ಯಾಂಡ್ ನ ಗ್ರೀನ್ ಪಕ್ಷದ ಸಂಸದೆ ಜೂಲಿ ಅನೀ ಗೆಂಟರ್ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.