Job Description: * ರುಪೇ ಕಾರ್ಡ್ ಗಳಿಗೆ ಭಾರತದ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡಿರುವದರಿಂದ ವಿಶ್ವದ ಅತಿದೊಡ್ಡ ಪೇಮೆಂಟ್ ಗೇಟ್ ವೇ ಕಂಪನಿ ವಹಿವಾಟಿಗೆ ಹಿನ್ನಡೆ ಉಂಟಾಗಿದೆ ಎಂದು ಅಮೇರಿಕಾ ಸರ್ಕಾರಕ್ಕೆ ವರದಿಯೊಂದರಲ್ಲಿ ವೀಸಾ ಕಂಪನಿಯು ತಿಳಿಸಿದೆ. * ಭಾರತದ ಪ್ರಧಾನಿ ಮೋದಿಯವರೇ ಸ್ವತಃ ರುಪೇ ಕಾರ್ಡ್ ಗೆ ಬೆಂಬಲ ನೀಡುತ್ತಿರುವದು ವೀಸಾಗೆ ಭಾರಿ ಹಿನ್ನಡೆಯನ್ನು ಉಂಟು ಮಾಡಿದೆ. * ಭಾರತದಲ್ಲಿ ಅತ್ಯಧಿಕ ಗ್ರಾಹಕರನ್ನು ಹೊಂದಿರುವ ವೀಸಾದ ಸ್ಥಾನದಲ್ಲಿ ಈಗ ರುಪೇ ಕಾರ್ಡ್ ಹೆಚ್ಚು ಬಳಕೆಯಾಗುತ್ತಿದೆ. * ಭಾರತದಲ್ಲಿ ಬಹುತೇಕ ಬ್ಯಾಂಕ್ ಗಳು ಗ್ರಾಹಕರಿಗೆ ಈಗ ರುಪೇ ಕಾರ್ಡ್ ಗಳನ್ನೇ ಹಂಚುತ್ತಿವೆ.ಇದರಿಂದ ಜನರಿಗೆ 'ಸ್ವದೇಶಿ' ಕಲ್ಪನೆ ಜನರಲ್ಲಿ ಮೂಡುತ್ತಿದೆ. * ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ. 63 ರಷ್ಟು ಪಾಲನ್ನು ರುಪೇ ಕಾರ್ಡ್ ಹೊಂದಿದೆ. * 2018 ರಲ್ಲಿ ದೇಶೀಯವಾದ ರುಪೇ ಕಾರ್ಡ್ ಗಳನ್ನೂ ಬಳಕೆ ಮಾಡುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ ಗಳಿಗೆ ಕರೆ ನೀಡಿದ್ದರು.