Job Description: * ಪ್ರಸ್ತುತ ಭಾರತದ ಪ್ಯಾರಾ ಪವರ್ಲಿಫ್ಟರ್ ಪರಮ್ಜೀತ್ ಕುಮಾರ್ ಅವರು ಜಾರ್ಜಿಯದ ಟಿಬಿಲಿಸಿಯಲ್ಲಿ ಜರುಗುತ್ತಿರುವ ವಿಶ್ವ ಪ್ಯಾರಾ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ಸ್ 2021 ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. * 49 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿರುವ ಪರಮ್ಜೀತ್ ಕುಮಾರ್ ಅವರು 158 ಕೆಜಿ ತೂಕ ಎತ್ತಿ ಸಾಧನೆ ಮಾಡಿದ್ದಾರೆ. * ಈ ಹಿಂದೆ ಪರಮ್ಜೀತ್ ಕುಮಾರ್ ಅವರು 2018 ರ ಅಕ್ಟೋಬರ್ ತಿಂಗಳಿನಲ್ಲಿ ಜಕಾರ್ತದಲ್ಲಿ ಜರುಗಿದ ಏಶ್ಯನ್ ಪ್ಯಾರಾ ಗೇಮ್ಸ್ ನಲಿಯುಕೂಡ ಕಂಚಿನ ಪದಕವನ್ನು ಜಯಿಸಿದ್ದಾರೆ. * ಈಜಿಪ್ಟ್ನ ಉಮರ್ ಶಮಿ ಅವರು 174 ಕೆಜಿ ಭಾರ ಎತ್ತಿ ಮೊದಲ ಸ್ಥಾನ ಅಂದರೆ ಚಿನ್ನದ ಪದಕವನ್ನು ಜಯಿಸಿದ್ದಾರೆ, ಹಾಗೂ ನಂತರದ ಸ್ಥಾನದಲ್ಲಿ ವಿಯೆಟ್ನಾಮ್ನ ವಾನ್ ಕಾಂಗ್ ಲೆ ಅವರು ಒಟ್ಟು 170 ಕೆಜಿ ಭಾರ ಎತ್ತಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.