Job Description: * ಇತ್ತೀಚಿಗಷ್ಟೇ ದಕ್ಷಿಣ ಆಫ್ರಿಕಾದ ಅಧಿಕಾರಿಗಳು (ಕೋವಿಡ್-19) ಕೊರೊನಾವೈರಸ್'ನ ಹೊಸ ರೂಪಾಂತರ ತಳಿಯನ್ನು ಪತ್ತೆಹಚ್ಚಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. * ಪ್ರಸ್ತುತ ದಕ್ಷಿಣ ಆಫ್ರಿಕಾ ಈ ಮಾಹಿತಿಯನ್ನು ತಿಳಿಸಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಹಾಗೂ ಹಾಂಗ್ ಕಾಂಗ್ ಈ 3 ದೇಶಗಳಿಂದ ಬರುವ ಅಥವಾ ಹೋಗುವ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ನಿರ್ದೇಶನವನ್ನು ನೀಡಿದೆ. * ಪ್ರಸ್ತುತ ಭಾರತದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ನೀಡಿರುವ ಮಾಹಿತಿಯ ಪ್ರಕಾರ 'COVID -19 ರೂಪಾಂತರದ ಬಿ.1.1529 ರ ಪ್ರಕರಣಗಳು ಬೋಟ್ಸ್ವಾನಾದಲ್ಲಿ "3 ಪ್ರಕರಣಗಳು" ದಕ್ಷಿಣ ಆಫ್ರಿಕಾ "6 ಪ್ರಕರಣಗಳು" ಹಾಗೂ ಹಾಂಗ್ ಕಾಂಗ್ "1 ಪ್ರಕರಣ" ಬೆಳಕಿಗೆ ಬಂದಿವೆ ಎಂದು ಸರ್ಕಾರಕ್ಕೆ ತಿಳಿಸಿದೆ. * ಭಾರತದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಎಲ್ಲಾ ರಾಜ್ಯಗಳು ಕೋವಿಡ್-ಪಾಸಿಟಿವ್ ಪ್ರಯಾಣಿಕರ ಮಾದರಿಗಳನ್ನು ಭಾರತೀಯ SARS-CoV-2 ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂನ ಗೊತ್ತುಪಡಿಸಿದ ಲ್ಯಾಬ್ಗಳಿಗೆ ರವಾನಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. * ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಈ ಕೋವಿಡ್-19 ರೂಪಾಂತರವನ್ನು ಚರ್ಚಿಸಲು WHO ಕಾರ್ಯನಿರತ ಗುಂಪಿನ ತುರ್ತು ಸಭೆಯನ್ನು ಕರೆದಿದೆ.