Job Description: * CBI'ನ ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ಅವರು ಇದೀಗ ಇಂಟರ್ಪೋಲ್ನ ಕಾರ್ಯಕಾರಿ ಸಮಿತಿಯ ಏಷ್ಯಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. * ಪ್ರಸ್ತುತ ಇಂಟರ್ಪೋಲ್ನ 89ನೇ ಸಾಮಾನ್ಯ ಸಭೆಯು ಇಸ್ತಾಂಬುಲ್ನಲ್ಲಿ ಜರುಗುತ್ತಿದೆ ಅದರಲ್ಲಿನ ಬೇರೆ ಬೇರೆ ಉನ್ನತ ಹುದ್ದೆಗಳಿಗಾಗಿ ಚುನಾವಣೆಯನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಇಂಟರ್ಪೋಲ್ನ ಕಾರ್ಯಕಾರಿ ಸಮಿತಿಯ ಏಷ್ಯಾ ಪ್ರತಿನಿಧಿ ಹುದ್ದೆಗೆ ಭಾರತ, ಚೀನಾ, ಸಿಂಗಪುರ, ರಿಪಬ್ಲಿಕ್ ಆಫ್ ಕೊರಿಯಾ ಹಾಗೂ ಜೋರ್ಡಾನ್ ದೇಶಗಳ ನಡುವೆ ಈ ಹುದ್ದೆಗಳಿಗಾಗಿ ಪೈಪೋಟಿ ಜರುಗಿತು.