Job Description: * ಇದೀಗ ದೇಶದಲ್ಲಿನ ಹವಾಮಾನ ಮುನ್ಸೂಚನೆ ಹಾಗೂ ಹವಾಮಾನ ಸೇವೆಗಳನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ನವೀಕರಿಸುವ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2,135 ಕೋಟಿ ರೂ. ಅನುಮೋದನೆ ನೀಡಿದೆ. * ಸಂಪುಟ ಸಮಿತಿಯು ವಾಯುಮಂಡಲ ಮತ್ತು ಹವಾಮಾನ ಸಂಶೋಧನೆ-ಮಾಡೆಲಿಂಗ್ ವೀಕ್ಷಣಾ ವ್ಯವಸ್ಥೆಗಳನ್ನು ಮುಂದುವರೆಸಲು ಅನುಮೋದನೆ ನೀಡಿದೆ, ಅಷ್ಟೇ ಅಲ್ಲದೇ ಇದೇ ಯೋಜನೆ ಅಡಿಯಲ್ಲಿ 8 ಉಪ-ಯೋಜನೆಗಳನ್ನು ಜಾರಿತರಲಾಗುವದು ಎಂದು ತಿಳಿಸಿದೆ. * ಪ್ರಸ್ತುತ ಭೂ ವಿಜ್ಞಾನ ಸಚಿವಾಲಯವು ಈ ಎಲ್ಲಾ ಉಪ-ಯೋಜನೆಗಳನ್ನು ಕಾರ್ಯಗತಗೊಳಿಸುತ್ತದೆ. * ಈ ಯೋಜನೆಯಿಂದಾಗಿ ದೇಶದಲ್ಲಿನ ಎಲ್ಲ ಹವಾಮಾನ ಹಾಗೂ ಸಾಗರ ಮುನ್ಸೂಚನೆಯ ಸೇವೆಗಳಲ್ಲಿ ಬದಲಾವಣೆ ತರುವ ಗುರಿಯನ್ನು ಹೊಂದಿದೆ. * ಮುಂಬರುವ 5 ವರ್ಷಗಳಲ್ಲಿ ಮುನ್ಸೂಚನೆ ವ್ಯವಸ್ಥೆ, ಹವಾಮಾನ ಸೇವೆಗಳು, ವಾತಾವರಣದ ವೀಕ್ಷಣಾ ಜಾಲ, ಮಾನ್ಸೂನ್ ಮತ್ತು ಮೋಡಗಳ ಅಧ್ಯಯನ ಹಾಗೂ ದೇಶದಲ್ಲಿ ಪೋಲಾರಿಮೆಟ್ರಿಕ್ ಡಾಪ್ಲರ್ ಹವಾಮಾನ ರಾಡಾರ್ಗಳನ್ನು ನಿಯೋಜಿಸುವ ಗುರಿಯನ್ನು ಹೊಂದಿವೆ.