Job Description: * ಇದೀಗ ದೇಶದ ಗುರುತನ್ನು ಜಗತ್ತಿನ ದೂರಸಂಪರ್ಕ ಮಾರುಕಟ್ಟೆಯಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಸ್ವದೇಶಿ 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ, ಈ ತಂತ್ರಜ್ಞಾನವನ್ನು 2023 ಅಥವಾ 2024 ನೇ ವರ್ಷದ ಪ್ರಾರಂಭದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿಕೆ ನೀಡಿದ್ದಾರೆ. * ಈ ಸ್ವದೇಶಿ 6ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ವಿಜ್ಞಾನಿ ಹಾಗೂ ಎಂಜಿನಿಯರ್ಗಳಿಗೆ ಪರವಾನಿಗೆಯನ್ನು ನೀಡಲಾಗಿದೆ, ಅಷ್ಟೇ ಅಲ್ಲದೇ ಇದನ್ನು ಇಂಡಿಯಾ ಟೆಲಿಕಾಂ ಸಾಫ್ಟ್ ವೇರ್ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ, ಹಾಗೂ ಇದನ್ನು ದೇಶೀಯವಾಗಿ ಸಿದ್ಧಪಡಿಸಲಾಗುತ್ತಿದೆ, ಇದರ ಜೊತೆಯಲ್ಲಿ ಸ್ವದೇಶೀಯವಾಗಿ 5ಜಿ ಸ್ಪೆಕ್ಟ್ರಂ ಅಭಿವೃದ್ಧಿಪಡಿಸಲು ಸಕಲ ಪ್ರಯತ್ನಗಳನ್ನೂ ಕಲ್ಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. * 5-ಜಿ ಹರಾಜು ಪ್ರಕ್ರಿಯೆ ಮುಂದಿನ ವರ್ಷದ 2ನೇ ತ್ತೈಮಾಸಿಕದಲ್ಲಿ ನಡೆಯಲಿದೆ ಎಂದಿದ್ದಾರೆ. * 5-ಜಿ ತಂತ್ರಜ್ಞಾನ: - 6 ಗಿಗಾ ಹರ್ಟ್ಜ್ ಗಿಂತ ಕೆಳಗೆ, ಗರಿಷ್ಠ 24.25 ಗಿ.ಹರ್ಟ್ ಗಿಂತ ಮೇಲೆ ಕಾರ್ಯ ನಿರ್ವಹಿಸಲಿದೆ. - ಒಂದು ಸೆಕೆಂಡಿಗೆ 1 ರಿಂದ 10 ಗಿಗಾಬೈಟ್ ದತ್ತಾಂಶ ಸಾಗಾಣಿಯ ಸಾಮರ್ಥ್ಯವನ್ನು ಹೊಂದಿದೆ. - ಮೊಬೈಲ್ಗಳಿಗೆ 1 ಸೆಕೆಂಡಿನಲ್ಲಿ 100 MBPS ದತ್ತಾಂಶ ರವಾನೆ, ಹಾಗೂ ಸ್ವೀಕಾರ ಸಾಮರ್ಥ್ಯವನ್ನು ಹೊಂದಿದೆ. * 6-ಜಿ ತಂತ್ರಜ್ಞಾನ: - 95 ಗಿಗಾ ಹರ್ಟ್ಜ್ ನಿಂದ 3 ಟೆರಾ ಹರ್ಟ್ಜ್ ವರೆಗೆ ಕಾರ್ಯ ನಿರ್ವಹಿಸಲಿದೆ. - 1 ಸೆಕೆಂಡಿಗೆ 1,000 ಗಿಗಾಬೈಟ್ನಷ್ಟು ದತ್ತಾಂಶ ವರ್ಗಾಯಿಸುವ ಸಾಮರ್ಥ್ಯವನ್ನು ಹೊಂದಿದೆ.