Job Description: * ವರ್ಷಾಂತ್ಯದ ಪ್ರತಿಷ್ಠಿತ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಟೆನಿಸ್ ಟೂರ್ನಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. * ಭಾನುವಾರ ನಡೆದ ಟೂರ್ನಿಯ ಫೈನಲ್ ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರು ಎರಡನೇ ಶ್ರೇಯಾಕಿಂತ ಹಾಗೂ ಯುಎಸ್ ಓಪನ್ ಚಾಂಪಿಯನ್ ರಷ್ಯಾದ ಡೇನಿಯಲ್ ಮೆಡ್ವೆಡೆವ್ ವಿರುದ್ಧ 6 - 4 , 6 - 4 ,ನೇರ ಸೆಟ್ ಗಳಿಂದ ಜಯಗಳಿಸಿದ್ದಾರೆ. * ಟೋಕಿಯೋ ಒಲಂಪಿಕ್ಸ್ ಸ್ವರ್ಣ ವಿಜೇತ ಜ್ವೆರೆವ್ 2 ಬಾರಿ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿ ಪ್ರಶಸ್ತಿಗಳಿಸಿದ್ದಾರೆ. * 2018 ರಲ್ಲಿ ಮೊದಲ ಬಾರಿ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿ ಪ್ರಶಸ್ತಿಗಳಿಸಿದ್ದರು.