Job Description: * ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2021 ರ ಮಹಿಳಾ ಬಿಗ್ ಬ್ಯಾಶ್ ಟಿ20 ಟೂರ್ನಿಯ ಅತ್ಯುತ್ತಮ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. * ಹರ್ಮನ್ ಪ್ರೀತ್ ಕೌರ್ ಅವರು ಮೆಲ್ಬೋರ್ನ್ ರೈನಿಗೇಡ್ಸ್ ಪರ ಆಡುತ್ತಿದ್ದಾರೆ. ಟೂರ್ನಿಯಲ್ಲಿ 3 ಅರ್ಧ ಶತಕಗಳೊಂದಿಗೆ ಒಟ್ಟು 399 ರನ್ ಕಲೆಹಾಕಿದ್ದಾರೆ. * ಟೂರ್ನಿಯಲ್ಲಿ 18 ಸಿಕ್ಸರ್ ಸಿಡಿಸಿರುವ ಹರ್ಮನ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿಯರ ಲಿಸ್ಟ್ ನಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. * ಟೂರ್ನಿಯಲ್ಲಿ 15 ವಿಕೆಟ್ ಕಬಳಿಸಿ, ಟೂರ್ನಿಯ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ್ತಿ ಎನಿಸಿದ್ದಾರೆ.