Job Description: * ನವೆಂಬರ್ 29 ರಂದು ನಡೆಯಲಿರುವ 56 ನೇ ಆವೃತ್ತಿಯ 2021 ರ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ ಗೆ ಅಮೇರಿಕದ ಹೂಸ್ಟನ್ ನಲ್ಲಿ ಚಾಲನೆ ನೀಡಲಾಗಿದೆ. * ಇದೆ ಪ್ರಥಮ ಬಾರಿಗೆ ಅಮೇರಿಕಾದಲ್ಲಿ ಈ ಟೂರ್ನಿಯು ನಡೆಯುತ್ತಿದೆ. * 1926 ರ ಉದ್ಘಾಟನಾ ಆವೃತ್ತಿಯಲ್ಲಿ 2 ಕಂಚಿನ ಪದಕ ಗಳಿಸಿದ್ದ ಭಾರತ ತಂಡವು ಇಲ್ಲಿಯವರೆಗೂ ಯಾವುದೇ ಪದಕವನ್ನು ಗೆದ್ದಿರುವದಿಲ್ಲ. * 95 ವರ್ಷಗಳ ಬಳಿಕ ಭಾರತ ತಂಡವು ಮೊದಲ ಪದಕ ಪಡೆಯುವ ಖುಷಿಯಲ್ಲಿದೆ, ಭಾರತದಿಂದ 9 ಆಟಗಾರರು ಕಣಕ್ಕಿಳಿಯಲಿದ್ದಾರೆ. * ಪುರುಷರ, ಮಹಿಳಾ ಸಿಂಗಲ್ಸ್ ಹಾಗೂ ಡಬಲ್ಸ್, ಮಿಶ್ರ ಡಬಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. * ಸಿಂಗಲ್ ಎಲಿಮಿನೇಷನ್ ಮಾದರಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. 128 ಸಿಂಗಲ್ಸ್ ವಿಭಾಗಗಳಲ್ಲಿ ಹಾಗೂ 64 ಆಟಗಾರರು ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. * ಚೀನಾ ದೇಶವು ಈ ಬಾರಿ ತನ್ನ ತಾರಾ ಆಟಗಾರರನ್ನು 2024 ರ ಒಲಂಪಿಕ್ಸ್ ಗೆ ಸಿದ್ಧತೆ ನಡೆಸುವ ಉದ್ದೇಶದಿಂದ ವಿಶ್ವ ಚಾಂಪಿಯನ್ ಶಿಪ್ ಗೆ ಕಳುಹಿಸದಿರಲು ನಿರ್ಧರಿಸಿದೆ.