Job Description: * ಭಾರತದ ಖಾಸಗಿ ಕಾಡು ನಿರ್ಮಾತೃ ಎಂದೇ ಖ್ಯಾತಿ ಗಳಿಸಿದ್ದ ಡಾ.ಅನಿಲ್ ಕುಮಾರ ಮಲ್ಹೋತ್ರ ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ. * ಪುಣೆ ಮೂಲದವರಾದ ಅನಿಲ ಕುಮಾರ ಅವರು ಕೆನಡಾ ಮೂಲದ ತಮ್ಮ ಪತ್ನಿ ಜೊತೆಗೂಡಿ ಕೊಡಗಿನ ತೇರಾಲು ಎಂಬಲ್ಲಿ 300 ಎಕರೆ ಪ್ರದೇಶವನ್ನು ಖಾಸಗಿ ಕಾಡಾಗಿ ನಿರ್ಮಿಸಿದ್ದಾರೆ. ಇದು 'ಭಾರತದ ಚೊಚ್ಚಲ ಖಾಸಗಿ ಕಾಡು' ಎಂದೇ ಖ್ಯಾತಿಯನ್ನು ಹೊಂದಿದೆ. * ಡಾ.ಅನಿಲ್ ಕುಮಾರ ಮಲ್ಹೋತ್ರ ಅವರ ಖಾಸಗಿ ಕಾಡಿನ ಹೆಸರು SAI ಸ್ಯಾಂಚುರಿ (ಸಾಯಿ - ಸೇವ್ ಅನಿಮಲ್ ಇನಿಶಿಯೇಟಿವ್ ). * 1991 ರಲ್ಲಿ ಪುಣೆಯಿಂದ ಕೊಡಗಿಗೆ ಬಂದ ಡಾ.ಅನಿಲ್ ಕುಮಾರ ಮಲ್ಹೋತ್ರ ಮತ್ತು ಅವರ ಪತ್ನಿ ಪಮೇಲಾ ಮಲ್ಹೋತ್ರ ಅವರು ಬಿರುನಾಣಿಯ ತೇರಾಲು ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ಥಳ ಖರೀದಿಸಿ ವಾಸವಾಗಿದ್ದರು.