Job Description: * ಈಗಿರುವ ರಾಜ್ಯದ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧಗಳ ಹೆಸರು ಬದಲಾವಣೆ ಮಾಡಿ ಇನ್ನು ಮುಂದೆ ತಾಲೂಕು ಆಡಳಿತ ಸೌಧ ಎಂದು ಕರೆಯಲಾಗುತ್ತದೆ ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. * ಸದ್ಯ ಇರುವ 'ಮಿನಿ' ಎಂಬ ಪದ ಆಂಗ್ಲ ಭಾಷೆಯಾಗಿದ್ದು, ತಾಲೂಕ ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಿ, ಕಾಯಿದೆ ಕಾನೂನಗಳನ್ನಾಗಲಿ ರೂಪಿಸುವ ಶಕ್ತಿ ಕೇಂದ್ರಗಳಲ್ಲದ ಕಾರಣ 'ಮಿನಿ ವಿಧಾನಸೌಧ' ಎಂಬುದರ ಬದಲಾಗಿ 'ತಾಲ್ಲೂಕು ಆಡಳಿತ ಸೌಧ' ಎಂದು ಬದಲಿಸಲಾಗುವುದು ಎಂದಿದೆ. * ಸಾರ್ವಜನಿಕರ ಕೋರಿಕೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಚ್ಛೆಯ ಮೇರೆಗೆ ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಕಂದಾಯ ಇಲಾಖೆ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.