Job Description: * ಕನ್ನಡಿಗರ ಅಭಿಮಾನದ ರಾಜರತ್ನ ಹಾಗೂ ಯುವರತ್ನ ಖ್ಯಾತಿಯ ನಟ ಪುನೀತ ರಾಜಕುಮಾರ ಅವರಿಗೆ ಘನತೆವೆತ್ತ ಕರ್ನಾಟಕ ರಾಜ್ಯ ಸರ್ಕಾರವು ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. * ಅಕಾಲಿಕವಾಗಿ ಅಗಲಿದ ನಟನಿಗೆ ಕನ್ನಡ ಚಿತ್ರರಂಗದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು "ಪುನೀತ ನಮನ" ಕಾರ್ಯಕ್ರಮವನ್ನು ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿತ್ತು. * "ಪುನೀತ ನಮನ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವ ಮಹತ್ವದ ಘೋಷಣೆ ಮಾಡುವ ಮೂಲಕ ದುಃಖಿತ ಅಪ್ಪು ಅಭಿಮಾನಿಗಳ ಮನಕ್ಕೆ ಎಳೆಯ ಪುಳಕವನ್ನು ಉಂಟುಮಾಡಿದರು. * ನಟ ಸಾರ್ವಭೌಮ ಮುತ್ತುರಾಜ (ಡಾ. ರಾಜಕುಮಾರ) ಅವರಿಗೆ ಒಲಿದ 'ಕರ್ನಾಟಕ ರತ್ನ' ಪ್ರಶಸ್ತಿ ಗೌರವವು ಅವರ ಮಗ ಮುದ್ದಿನ ಮುತ್ತು ಪುನೀತ ರಾಜಕುಮಾರ ಅವರಿಗೂ ಮರಣೋತ್ತರವಾಗಿ ಒಲಿದಿರುವದು ವಿಶೇಷವಾಗಿದೆ. * ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಟ ಸಾರ್ವಭೌಮ ಡಾ. ರಾಜಕುಮಾರ ಮತ್ತು ಪಾರ್ವತಮ್ಮ ರಾಜಕುಮಾರ ಅವರ ಸ್ಮಾರಕದ ಮಾದರಿಯಲ್ಲೇ ಪುನೀತ ರಾಜಕುಮಾರ ಅವರ ಸ್ಮಾರಕವನ್ನು ಅಭಿವೃದ್ಧಿ ಪಡಿಸಲಾಗುವದು ಎಂದರು.