Job Description: *ಅಮೆರಿಕದಿಂದ 30 ಪ್ರಿಡೇಟರ ಡ್ರೋನ್ ಗಳನ್ನೂ ಭಾರತೀಯ ಸೇನೆಗೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ ಖರೀದಿ ಮಾಡಲು ಭಾರತ ಸರ್ಕಾರ ನಿರ್ಧಾರ ಮಾಡಿದೆ. * ಭಾರತೀಯ ಸೇನೆಯು ಡ್ರೋನ್ ಸೇರಿದಂತೆ ಸುಮಾರು 21 ಸಾವಿರ ಕೋಟಿ ರೂಪಾಯಿ ಮೊತ್ತದ ಭದ್ರತಾ ಉಪಕರಣಗಳನ್ನು ಖರೀದಿ ಮಾಡಲು ಬೇಡಿಕೆ ಇಟ್ಟಿದೆ. ಇದಕ್ಕೆ ಕೇಂದ್ರ ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿದೆ. * ಪ್ರಿಡೇಟರ ಡ್ರೋನ್ ಗಳು ಗಡಿ ಮೇಲೆ ಕಣ್ಗಾವಲು, ಒಳನುಸುಳಿಕೆ ಯತ್ನ ಗುರುತಿಸಿ ದಾಳಿ ಮಾಡುವುದು, ವೈಮಾನಿಕ ಮಾರ್ಗವಾಗಿ ಶತ್ರುಪಡೆಯ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ.