Job Description: * ಪಿ. ಪ್ರದೀಪ್ ಕುಮಾರ್ ಅವರು ಸೋಮವಾರ ಕರ್ಣಾಟಕ ಬ್ಯಾಂಕಗೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, 3 ವರ್ಷದವರೆಗೆ ಮುಂದುವರೆಯಲಿದ್ದಾರೆ. * ಗ್ರಾಹಕರಿಗೆ ಈಗಾಗಲೇ ಉತ್ತಮ ಸೇವೆ ಒದಗಿಸುತ್ತಿರುವ ಕರ್ಣಾಟಕ ಬ್ಯಾಂಕನ್ನು ಮತ್ತಷ್ಟು ಡಿಜಿಟಲೀಕರಣ ಮಾಡುವ ಮೂಲಕ ಯುವ ಪೀಳಿಗೆಗೆ ಒಳ್ಳೆಯ ಸೇವೆ ನೀಡುವದು ನನ್ನ ಮೊದಲ ಆದ್ಯತೆಯಾಗಿದೆ. ಇದಕ್ಕೆ ಬ್ಯಾಂಕಿನ ಎಲ್ಲ ಅಧಿಕಾರಿಗಳ ಸಹಕಾರವು ಮುಖ್ಯ ಹಾಗೂ ಅವಶ್ಯಕ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ 97 ವರ್ಷ ಪೂರೈಸಿರುವ ಕರ್ಣಾಟಕ ಬ್ಯಾಂಕಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವದಕ್ಕೆ ಸಂತಸವಾಗುತ್ತಿದೆ ಎಂದು ಬೆಂಗಳೂರಿನ ಬಸವನಗುಡಿಯ ಕರ್ಣಾಟಕ ಬ್ಯಾಂಕನ ಪ್ರಾದೇಶಿಕ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು. * ಬೆಂಗಳೂರಿನ ಬಸವನಗುಡಿಯ ಕರ್ಣಾಟಕ ಬ್ಯಾಂಕನ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕನ ನೂತನ ಅಧ್ಯಕ್ಷರಿಗೆ ಎಂಡಿ ಎಂ. ಎಸ್ ಮಹಾಬಲೇಶ್ವರ್ ಶುಭ ಕೋರಿದರು.