Job Description: * ಖ್ಯಾತ ಇತಿಹಾಸಕಾರ, ಲೇಖಕ 99 ರ ವಯೋಮಾನದ ಬಾಬಾಸಾಹೇಬ ಪುರಂದರೆ (ಬಲ್ವಂತ ಮೊರೇಶ್ವರ್ ಪುರಂದರೆ ) ಅವರು ಸೋಮವಾರ ಮುಂಜಾನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಕೊನೆಯುಸಿರೆಳಿದಿದ್ದಾರೆ. * ವಯೋಸಹಜ ಕಾಯಿಲೆಗಳಿಗೆ ತುತ್ತಾಗಿದ್ದ ಅವರನ್ನು ಮೂರೂ ದಿನದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. * ಘನತೆವೆತ್ತ ಭಾರತ ಸರ್ಕಾರ 2019 ರಲ್ಲಿ ಪುರಂದರೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು ಹಾಗೂ ವಿವಿಧ ಪ್ರಶಸ್ತಿಗಳಿಗೆ ಪುರಂದರೆ ಅವರು ಭಾಜನರಾಗಿದ್ದರು. * ಛತ್ರಪತಿ ಶಿವಾಜಿ ಮಹಾರಾಜ್ ಅವರ ಕುರಿತು ನಿಖರವಾಗಿ ಹೇಳುತ್ತಿದ್ದ ಕಾರಣಕ್ಕಾಗಿ ಪುರಂದರೆ ಅವರಿಗೆ 'ಶಿವ್ ಶಾಹಿರ್' ಎಂಬ ಖ್ಯಾತನಾಮವಿತ್ತು. * ಪುರಂದರೆ ಅವರು 1980 ರ ದಶಕದಲ್ಲಿ ಶಿವಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿ 'ಜಾಣತಾ ರಾಜ' ನಾಟಕವನ್ನು ರಚಿಸಿ, ನಿರ್ದೇಶಿಸಿದ್ದರು.