Job Description: * ವಿವಿಎಸ್ ಲಕ್ಷ್ಷ್ಮಣ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯ ಹೊಸ ಮುಖ್ಯಸ್ಥರಾಗಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾನುವಾರದಂದು ಖಚಿತಪಡಿಸಿದ್ದಾರೆ. * ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆದ ಬಳಿಕ ಏನ್ ಸಿ ಎ ಮುಖ್ಯಸ್ಥಸ್ಥಾನ ಖಾಲಿಯಾಗಿದೆ. *ಏನ್ ಸಿ ಎ ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಷ್ಮಣ್ ವರ್ಷದಲ್ಲಿ ಸುಮಾರು 200 ದಿನಗಳ ಕಾಲ ಬೆಂಗಳೂರಿನಲ್ಲೇ ಇರಬೇಕಾಗಿದೆ. * ರಾಹುಲ್ ದ್ರಾವಿಡ್ ಏನ್ ಸಿ ಎ ಮುಖ್ಯಸ್ಥರಾಗಿ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ವಿವಿಎಸ್ ಲಕ್ಷ್ಷ್ಮಣ್ ಗೂ ಅಷ್ಟೇ ಸಂಭಾವನೆ ಸಿಗುವ ಸಾಧ್ಯತೆ ಇದೆ. *ಒಂದು ಅವಧಿಯಲ್ಲಿ ಕೋಲ್ಕತ್ತಾ ಟೆಸ್ಟ್ ನ ಹೀರೋಗಳಾಗಿ ಮಿಂಚಿದ ವಿವಿಎಸ್ ಲಕ್ಷ್ಷ್ಮಣ್ - ರಾಹುಲ್ ದ್ರಾವಿಡ್ ಅವರು ಇದೀಗ ಭಾರತ ತಂಡದ ಮುಖ್ಯ ಕೋಚ್ ಹಾಗೂ ಏನ್ ಸಿ ಎ ಮುಖ್ಯಸ್ಥರಾಗಿ ಭಾರತೀಯ ಕ್ರಿಕೆಟ್ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆಗಳನ್ನು ನೀಡುವ ಆಶಾಭಾವವಿದೆ.