Job Description: *ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ರೆರಾ), ಮನೆ ಅಥವಾ ಫ್ಲಾಟ್ ಖರೀದಿಸುವ ಗ್ರಾಹಕರು ಬಿಲ್ಡರ್ ವಿರುದ್ಧದ ದೂರೂ ಇತ್ಯರ್ಥಪಡಿಸುವ ಅಧಿಕಾರವನ್ನು ತನ್ನ ಒಬ್ಬ ಸದಸ್ಯರೊಬ್ಬರಿಗೆ ನೀಡಬಹುದು ಎಂದು ಭಾರತ ದೇಶದ ಸರ್ವೋಚ್ಚ ನ್ಯಾಯಾಲಯದ ವು ತಿಳಿಸಿದೆ. *ನ್ಯಾಯಮೂರ್ತಿ ಯು. ಯು. ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು, 'ಪ್ರಾಧಿಕಾರ(ರೆರಾ)ಕ್ಕೆ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಕಾರ್ಯಭಾರ ಒಪ್ಪಿಸುವ ಅಧಿಕಾರ ನೀಡಲಿದೆ' ಎಂದು ಹೇಳಿತು. * ಗ್ರಾಹಕರ ದೂರೂ ಆಧರಿಸಿ ಪ್ರಾಧಿಕಾರ ಅಥವಾ ಪ್ರಾಧಿಕಾರ ನಿಯೋಜಿಸುವ ಸದಸ್ಯ ಹೊರಡಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಗ್ರಾಹಕರಿಗೆ ಹಿಂದಿರುಸಬೇಕಾದ ಮೊತ್ತ ಲೆಕ್ಕಹಾಕುವಲ್ಲಿ ಲೋಪ ಕುರಿತಂತೆ ಮೇಲ್ಮನವಿ ಸಲ್ಲಿಸಬಹುದು ಎಂದು ತ್ರಿಸದಸ್ಯ ಪೀಠವು ಹೇಳಿದೆ.