Job Description: * ಪ್ರಸ್ತುತ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (UNESCO) ಶ್ರೀನಗರವನ್ನು ಯುನೆಸ್ಕೋ ಕ್ರಿಯೇಟಿವ್ ಸಿಟಿಸ್ ನೆಟ್ ವರ್ಕ್'ನ ಭಾಗವಾಗಿ ನೇಮಕ ಮಾಡಿದೆ. * ಇದೀಗ ಜಮ್ಮು ಮತ್ತು ಕಾಶ್ಮೀರವು ವಿಶ್ವದಾದ್ಯಂತ 295 ಸೃಜನಶೀಲ ನಗರಗಳ ಜಾಲದ ಕ್ಲಬ್ʼಗೆ ಪ್ರವೇಶವನ್ನು ಪಡೆದುಕೊಂಡಿದೆ. * ಈ ಮೊದಲು ಮುಂಬೈ, ಚೆನ್ನೈ, ಹೈದರಾಬಾದ್, ವಾರಣಾಸಿ ಮತ್ತು ಜೈಪುರದ ನಗರಗಳು ಯುನೆಸ್ಕೋ ಮಾನ್ಯತೆಯನ್ನು ಪಡೆದಿವೆ, ಇದೀಗ ಈ ಪಟ್ಟಿಗೆ ಶ್ರೀನಗರವು ಸೇರಿಕೊಂಡಿದೆ. * ಪ್ರಸ್ತುತ ಯುನೆಸ್ಕೋ ಮಾನ್ಯತೆ ಪಡೆದ ಶ್ರೀನಗರವು ಭಾರತೀಯ 6ನೇ ನಗರವಾಗಿದೆ. * ಶ್ರೀನಗರಕ್ಕೆ ಸಿಕ್ಕಿರುವ ಮಾನ್ಯತೆಯ ಖುಷಿಯನ್ನು ಸಂಭ್ರಮಿಸಲು ಒಂದು ತಿಂಗಳುಗಳ ಕಾಲ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ ಎಂದು ಜಮ್ಮು ಕಾಶ್ಮೀರದ ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಜುನೈದ್ ಅಜೀಮ್ ಮಟ್ಟು ಅವರು ಮಾಹಿತಿ ನೀಡಿದ್ದಾರೆ.