Job Description: * ಪ್ರತಿದಿನವು ನವದೆಹಲಿಯಲ್ಲಿ ಹವಾಮಾನ ಬದಲಾವಣೆ ಹೆಚ್ಚಾಗುತ್ತಿದ್ದು, ತಾಪಮಾನವು ಕೂಡ ಏರಿಕೆಯಾಗುತ್ತಿದೆ, ಈ ಕಾರಣಗಳಿಂದ ಹಿಮನದಿಗಳು ಕರಗುತ್ತಿವೆ ಇದರಿಂದಾಗಿ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದೆ. * ಪ್ರಸ್ತುತ ಸಮುದ್ರದ ನೀರಿನ ಮಟ್ಟ ಏರಿಕೆಯಾಗುವದರಿಂದ ಭಾರರತದಲ್ಲಿನ ಸುಮಾರು 9 ನಗರಗಳು ಮುಳುಗಡೆಯ ಭೀತಿಯನ್ನು ಎದುರಿಸಬೇಕಾಗಿದೆ ಎಂದಿದ್ದಾರೆ. * ಪ್ರಸ್ತುತ ಇಂಟರ್ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC) ಭಾರತದಲ್ಲಿನ ಸುಮಾರು 12 ಕರಾವಳಿ ನಗರಗಳಿಗೆ ಎಚ್ಚರಿಕೆ ಮಾಹಿತಿಯನ್ನು ರವಾನಿಸಿದೆ. * 2050 ರ ವೇಳೆಗೆ ಸಮುದ್ರ ಮಟ್ಟದಲ್ಲಿ ಏರಿಕೆ ಯಾಗಲಿದೆ ಇದರಿಂದಾಗಿ ಭಾರತದಲ್ಲಿನ 40 ದಶಲಕ್ಷಕ್ಕೂ ಅಧಿಕ ಜನರಿಗೆ ತೊಂದರೆ ಅನುಭವಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಮಾಡಿದೆ. * ಮುಳುಗಡೆ ಭೀತಿಯಲ್ಲಿರುವ ನಗರಗಳು: ಕಾಂಡ್ಲಾ ಗುಜರಾತ್ ಪರದೀಪ್, ಒಡಿಶಾ ಭಾವನಗರ, ಮುಂಬೈ-ಮಹಾರಾಷ್ಟ್ರ ಓಖಾ, ಗುಜರಾತ್ ಮೊರ್ಮುಗೋ, ಗೋವಾ, ಕೊಚ್ಚಿನ್ ಕೇರಳ,ಆಂಧ್ರ ಪ್ರದೇಶ, ಖಿದಿರ್ಪುರ್- ಪಶ್ಚಿಮ ಬಂಗಾಳ, ಮಂಗಳೂರು- ಕರ್ನಾಟಕ, ಚೆನ್ನೈ- ತಮಿಳುನಾಡು, ಟುಟಿಕೋರಿನ್- ತಮಿಳುನಾಡು, ಈ ಎಲ್ಲ ನಗರ ಪ್ರದೇಶಗಳು ಮುಳುಗಡೆ ಭೀತಿಯಲ್ಲಿವೆ ಎಂದು ವಿಶ್ವಸಂಸ್ಥೆಯ ವರದಿ ಮಾಡಿದೆ.