Job Description: * ಪ್ರಸ್ತುತ ಯಾಹೂ(Yahoo) ಚೀನಾದಲ್ಲಿ 2021 ರ ನವೆಂಬರ್ 1 ರಿಂದ ತನ್ನ ಸೇವೆಗಳನ್ನು ನಿಲ್ಲಿಸಿದೆ, ಈ Yahoo Inc. ಹೆಚ್ಚು ಸವಾಲಿನ ವ್ಯಾಪಾರ ಮತ್ತು ಕಾನೂನು ಪರಿಸರದ ಕಾರಣದಿಂದಾಗಿ ಹಿಂದೆ ಸರಿದಿದೆ ಎನ್ನಲಾಗಿದೆ. * Yahoo ಈ ನಿರ್ಧಾರವನ್ನು ಬಳಕೆದಾರರ ಹಕ್ಕುಗಳಿಗಾಗಿ ಮತ್ತು ಉಚಿತ ಮತ್ತು ಮುಕ್ತ ಇಂಟರ್ನೆಟ್'ನ ಬದ್ಧತೆಗೆ ಅನುಗುಣವಾಗಿ ಕೈಗೊಂಡಿದೆ. * ಚೀನಾದಲ್ಲಿನ ಅಧಿಕಾರಿಗಳು ಇಂಟರ್ನೆಟ್ ಸೆನ್ಸಾರ್ಶಿಪ್ ಮೇಲೆ ತೀಕ್ಷ್ಣವಾದ ಹಿಡಿತವನ್ನು ಕೈಗೊಳ್ಳುತ್ತಿದ್ದಾರೆ. * ಇತ್ತೀಚಿಗೆ ಚೀನಾ ದೇಶವು ತನ್ನ 'ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾನೂನ'ನ್ನು ಜಾರಿಗೆ ತಂದಿದೆ, ಈ ಕಾನೂನು ಚೀನಾದ ಕಂಪನಿಗಳು ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು ಹಾಗೂ ಅದರ ಮಾನದಂಡಗಳನ್ನು ಹೊಂದಿದೆ. * ಈ ಹಿಂದೆ ಯಾಹೂ(Yahoo) 2007 ರಲ್ಲಿ ಇಬ್ಬರು ಚೀನಾ ದೇಶದ ಭಿನ್ನಮತೀಯರ ಮಾಹಿತಿಯನ್ನು ಬೀಜಿಂಗ್ಗೆ ಹಸ್ತಾಂತರಿಸಿತ್ತು, ಇದರಿಂದಾಗಿ ಈ ಭಿನ್ನಮತೀಯರನ್ನು ಸೆರೆಮನೆಗೆ ಕಳುಹಿಸಲು ಕಾರಣವಾಯಿತು, ಇದಾದ ಬಳಿಕ ಯಾಹೂ ಚೀನಾದಲ್ಲಿನ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು, ಹಾಗೂ 2015 ರಲ್ಲಿ ಚೀನಾದ ಬೀಜಿಂಗ್ನಲ್ಲಿರುವ ತನ್ನ ಕಚೇರಿಯನ್ನು ಸ್ಥಗಿತಗೊಳಿಸಿತು.