Job Description: * ಇತ್ತೀಚಿಗೆ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ, ಇದೀಗ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ವಿದೇಶೀ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವದಾಗಿ ಘೋಷಣೆ ಮಾಡಿದೆ. * ಪ್ರಸ್ತುತ ಅಫ್ಘಾನ್ ದೇಶದ ಹಿತಾಸಕ್ತಿಯನ್ನು ಕಾಯುವ ದೃಷ್ಟಿಯಿಂದ, ದೇಶದ ಜನರು ತಮ್ಮ ಪ್ರತಿದಿನದ ವ್ಯವಹಾರದಲ್ಲಿ ಅಫ್ಘಾನಿಸ್ತಾನದ ಕರೆನ್ಸಿಯನ್ನು ಬಳಸಬೇಕು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ, ಹಾಗೂ ಈ ನಿರ್ಣಯವನ್ನು ಜಾರಿ ಮಾಡಿದ್ದಾರೆ. * ಒಂದು ಅಫ್ಘಾನ್ ಹಣ 0.011 ಯುಎಸ್ ಡಾಲರ್ಗೆ ಸಮವಾಗಿದೆ, ಹಾಗೂ ಒಂದು ಅಫ್ಘಾನ್ ಹಣ 1.87 ಪಾಕಿಸ್ತಾನ ರೂ.ಗೆ ಸಮವಾಗಿದೆ ಎಂದು ತಿಳಿದು ಬಂದಿದೆ, ಈ ನಿಟ್ಟಿನಲ್ಲಿ ತಾಲಿಬಾನ್ ಸರ್ಕಾರವು ವಿದೇಶೀ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಾಲಿಬಾನ್ ತಿಳಿಸಿದೆ.