Job Description: * ಇದೀಗ WHO ದಿಂದ ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಮನ್ನಣೆ ಸಿಕ್ಕಿದೆ, ಹಾಗೂ ತುರ್ತು ಬಳಕೆಗೆ ಅನುಮೋದನೆ ನೀಡಿದೆ. * ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗೆ ಅಧಿಕೃತವಾಗಿ ಸೇರಿಸಿದೆ, ಇದರಿಂದಾಗಿ ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಮನ್ನಣೆ ಲಭಿಸಿದೆ. * ಪ್ರಸ್ತುತ ಭಾರತ್ ಬಯೋಟೆಕ್ ಸಂಸ್ಥೆಯು ಈ ಕೋವ್ಯಾಕ್ಸಿನ್ ರೋಗಲಕ್ಷಣದ COVID-19 ವಿರುದ್ಧ ಶೇ.77.8 ರಷ್ಟು ಪರಿಣಾಮಕಾರಿಯಾಗಿ ಹೋರಾಡಲು ಯಶಸ್ವಿಯಾಗಿದೆ, ಅಷ್ಟೇ ಅಲ್ಲದೇ ಹೊಸ ತಳಿ ಡೆಲ್ಟಾದ ವಿರುದ್ಧ ಶೇ.65.2 ರಷ್ಟು ಪರಿಣಾಮಕಾರಿಯಾಗಿ ಹೋರಾಡಲಿದೆ ಎಂದು ಸಂಸ್ಥೆ ತಿಳಿಸಿದೆ. * ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಸೋಂಕಿತರ ತುರ್ತು ಚಿಕಿತ್ಸೆ ಲಸಿಕೆಗಳ ಪಟ್ಟಿಗೆ ಈ ಮೊದಲು ಅಸ್ಟ್ರಾಜೆನೆಕಾ ಮತ್ತು ಸೀರಮ್ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್'ನ್ನು ಸೇರ್ಪಡೆ ಯಾಗಿದ್ದವು, ಇದೀಗ ಕೋವ್ಯಾಕ್ಸಿನ್ ಲಸಿಕೆ ಸೇರ್ಪಡೆಯಾಗಿದೆ. * ಪ್ರಸ್ತುತ ಕೋವಿಡ್-19 ಸೋಂಕಿತರ ತುರ್ತು ಚಿಕಿತ್ಸೆ ಲಸಿಕೆಗಳ ಪಟ್ಟಿಗೆ ಸೇರ್ಪಡೆಯಾಗಿರುವ ಭಾರತದ 2 ನೇ ಲಸಿಕೆ ಇದಾಗಿದೆ.