Job Description: * ಪ್ರಸ್ತುತ ಇಸ್ರೇಲ್ ನ ಆಕ್ರಮಿತ ಪಶ್ಚಿಮದಂಡೆಯಲ್ಲಿನ ಯೆಹೂದಿ ನಿವಾಸಿಗಳಿಗೆ 3000 ವಸತಿ ಮನೆಗಳ ನಿರ್ಮಾಣ ಯೋಜನೆಯನ್ನು ಘೋಷಣೆ ಮಾಡಿತ್ತು, ಇದೀಗ ಇಸ್ರೇಲ್ ಈ ಪ್ರದೇಶದಲ್ಲಿನ ಪೆಲೆಸ್ತೀನಿಯರ 1,300 ಮನೆಗಳನ್ನು ಅಧಿಕೃತಗೊಳಿಸಿದೆ. * ಅಮೇರಿಕ ರಾಷ್ಟ್ರದ ಜೊತೆಗಿನ ಭಿನ್ನಮತ ಕಡಿಮೆಗೊಳಿಸಲು, ಮತ್ತು ಮೈತ್ರಿಕೂಟದ ಮಿತ್ರಪಕ್ಷಗಳ ಅಸಮಾಧಾನವನ್ನು ಬಗೆಹರಿಸಿಕೊಳ್ಳಲು ಇಸ್ರೇಲ್ ಸರ್ಕಾರವು ತಿಳಿಸಿದೆ, ಆದರೆ ಇದೀಗ ಇಸ್ರೇಲ್ ಅಧಿಕೃತಗೊಳಿಸಿದ ಮನೆಗಳು ಅಲ್ಪಪ್ರಮಾಣದ್ದಾಗಿವೆ ಎಂದು ತಿಳಿದು ಬಂದಿದೆ. * ಇಸ್ರೇಲ್ ಸರ್ಕಾರವು ಇದೀಗ ಪಶ್ಚಿಮ ದಂಡೆಯಲ್ಲಿ ಪೆಲೆಸ್ತೀನಿಯನ್ನರಿಗೆ ಮನೆ ನಿರ್ಮಿಸಲು ಅನುಮತಿ ನೀಡಲಿದೆ ಎಂದು ಇಸ್ರೇಲ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಈ ಹಿಂದೆ ಇಸ್ರೇಲ್ 1967 ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಈ ಪಶ್ಚಿಮದಂಡೆ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. * ಈ ಪಶ್ಚಿಮದಂಡೆ ಪ್ರದೇಶದಲ್ಲಿ ಸರಿ ಸುಮಾರು 2.5 ಬಿಲಿಯನ್ ಪೆಲೆಸ್ತೀನಿಯರು ಹಾಗೂ 5 ಲಕ್ಷ ಯೆಹೂದಿಗಳು ವಾಸವಾಗಿದ್ದಾರೆ.