Job Description: * ಪ್ರಸ್ತುತ ಭಾರತವು ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಮಿತಗೊಳಿಸುವ ನೆಟ್ ಝೀರೋ ಗುರಿಯನ್ನು 2070 ಕ್ಕೆ ತಲುಪಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹವಾಮಾನ ವೈಪರೀತ್ಯ ತಡೆ ಸಮಾರಂಭದಲ್ಲಿ ಘೋಷಣೆ ಮಾಡಿದರು. * 2050 ರ ವೇಳೆಗೆ ಅಮೇರಿಕ ಮತ್ತು ಐರೋಪ್ಯ ದೇಶಗಳು ನೆಟ್ ಝೀರೊ ಗುರಿಯನ್ನು ತಲುಪುವುದಾಗಿ ತಿಳಿಸಿವೆ, ಹಾಗು ಚೀನಾ ದೇಶವು 2060 ಕ್ಕೆ ನೆಟ್ ಝೀರೊ ಗುರಿಯನ್ನು ತಲುಪುವುದಾಗಿ ತಿಳಿಸಿದೆ. * ಅಭಿವೃದ್ಧಿ ಹೊಂದಿದ ದೇಶಗಳು ಭಾರತಕ್ಕೆ 2070 ರ ವೇಳೆಗೆ ನೆಟ್ ಝೀರೊ ಗುರಿ ತಲುಪಲು ಆರ್ಥಿಕ ನೆರವು ನೀಡಬೇಕು, ಅಷ್ಟೇ ಅಲ್ಲದೇ ಅಭಿವೃದ್ಧಿಶೀಲ ದೇಶಗಳು ಸುಮಾರು 75 ಲಕ್ಷ ಕೋಟಿ ನೆರವು ನೀಡಬೇಕು ಎಂದು ತಿಳಿಸಲಾಗಿದೆ. * ಭಾರತ ದೇಶದಲ್ಲಿ 2030 ರ ಅವಧಿಗೆ 450-500 ಗಿಗಾವಾಟ್ ನಷ್ಟು ವಿದ್ಯುತ್ ನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆ ಮಾಡಲಾಗುತ್ತದೆ, ಅಷ್ಟೇ ಅಲ್ಲದೇ 2030 ರ ಸಮಯಕ್ಕೆ ಭಾರತಕ್ಕೆ ಅಗತ್ಯವಿರುವ ವಿದ್ಯುತ್ನಲ್ಲಿ ಶೇ. 50 ರಷ್ಟ ವಿದ್ಯುತ್ ನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಭಾರತವು 2030 ರ ವೇಳೆಗೆ ವಾರ್ಷಿಕ ಇಂಗಾಲ ಹೊರಸೂಸುವಿಕೆಯಲ್ಲಿ ಸುಮಾರು 100 ಕೋಟಿ ಟನ್'ಗಳಷ್ಟು ಕಡಿಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಭಾರತ ದೇಶದಲ್ಲಿನ ಶೇ. 79 ರಷ್ಟು ಟ್ರಕ್ಗಳು 2070 ರ ವೇಳೆಗೆ ವಿದ್ಯುತ್ ಚಾಲಿತವಾಗಿರಬೇಕು, ಹಾಗೂ ಶೇ. 21 ರಷ್ಟು ಟ್ರಕ್ಗಳು ಜಲಜನಕದ ಸೆಲ್ ಗಳಿಂದ ಚಾಲಿತವಾಗಿರಬೇಕು ಎಂದಿದ್ದಾರೆ.