Job Description: * ಪ್ರಸ್ತುತ ಭಾರತ ಸರ್ಕಾರ ಹಾಗೂ ವಿಶ್ವ ಬ್ಯಾಂಕ್ ಮೇಘಾಲಯದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು 40 ಮಿಲಿಯನ್ ಯೋಜನೆಗೆ MoU ಗೆ ಸಹಿ ಹಾಕಿವೆ, ಈ ಒಪ್ಪಂದದಿಂದ ಕೋವಿಡ್-19 ಸಾಂಕ್ರಾಮಿಕ ರೋಗದಲ್ಲಿನ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿರ್ವಹಣೆ ಮಾಡಲು ರಾಜ್ಯಕ್ಕೆ ಇದು ಸಹಾಯ ಮಾಡಲಿದೆ. * ಈ ಯೋಜನೆಯು ರಾಜ್ಯದಲ್ಲಿ ಆರೋಗ್ಯ ವಿಮಾ ಕಾರ್ಯಕ್ರಮದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಿದೆ, ಹಾಗೂ ಉತ್ತಮ ಮಾನವ ಸಂಪನ್ಮೂಲ ವ್ಯವಸ್ಥೆಗಳ ಮೂಲಕ ಆರೋಗ್ಯ ಸೇವೆಗಳನ್ನು ಸುಧಾರಿಸಲಿದೆ, ಅಷ್ಟೇ ಅಲ್ಲದೆ ಈ ಯೋಜನೆಯು ಅಂತಿಮವಾಗಿ ಔಷಧಗಳ ಪ್ರವೇಶವನ್ನು ಇನ್ನಷ್ಟು ಸಕ್ರಿಯಗೊಳಿಸುತ್ತದೆ. * ಈ ಯೋಜನೆಯಿಂದ ರಾಜ್ಯದ ಎಲ್ಲಾ 11 ಜಿಲ್ಲೆಗಳು ಪ್ರಯೋಜನವನ್ನು ಪಡೆಯಲಿವೆ, ಈ ಯೋಜನೆಯಿಂದ ಮಹಿಳೆಯರಿಗೆ ಆರೋಗ್ಯ ಸೇವೆಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಸಹಾಯ ಮಾಡಲಿದೆ, ಹಾಗೂ ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ಬಡವರು ಹಾಗೂ ದುರ್ಬಲರಿಗೆ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುತ್ತದೆ. * ಮೇಘಾ ಆರೋಗ್ಯ ವಿಮಾ ಯೋಜನೆಯು ಮೇಘಾಲಯದ ಆರೋಗ್ಯ ವಿಮಾ ಕಾರ್ಯಕ್ರಮದ ಪರಿಣಾಮಕಾರಿತ್ವವನ್ನು ಮತ್ತಷ್ಟು ಸುಧಾರಿಸಲಿದೆ, ಇದೀಗ ಇದು 56% ಕುಟುಂಬಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.