Job Description: * ಪ್ರಸ್ತುತ ತೆಲಂಗಾಣ ರಾಜ್ಯಕ್ಕೆ ಆಹಾರ ಮತ್ತು ಕೃಷಿ ಸಂಸ್ಥೆ (FAO) ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ. * ಇದು 2021 ರ ನವೆಂಬರ್ 4 ಮತ್ತು ನವೆಂಬರ್ 5 ರಂದು ರೋಮ್ನಲ್ಲಿ ಜರುಗುವ ಎರಡು ದಿನಗಳ ಅಂತರರಾಷ್ಟ್ರೀಯ ಬೀಜ ಸಮ್ಮೇಳನವಾಗಿದೆ. * ಈ ಸಮ್ಮೇಳನವನ್ನು ಬೀಜ ಉದ್ಯಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಆಯೋಜಿಸಲಾಗಿದೆ, ಈ ಸಮ್ಮೇಳನದಲ್ಲಿ ತೆಲಂಗಾಣ ಬೀಜ ಕೇಂದ್ರ ವಿಷಯದ ಬಗ್ಗೆ ಭಾರತದ ಯಶೋಗಾಥೆ ಉಪನ್ಯಾಸ ನೀಡಲಿದ್ದಾರೆ. * ಆಹಾರ ಮತ್ತು ಕೃಷಿ ಸಂಸ್ಥೆ (FAO)ಯು ಇದೊಂದು ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ಇದು ಹಸಿವನ್ನು ಸೋಲಿಸಲು ಮತ್ತು ಪೌಷ್ಟಿಕಾಂಶ ಮತ್ತು ಆಹಾರ ಭದ್ರತೆಯನ್ನು ಸುಧಾರಿಸಲು ಸಹಾಯ ಮಾಡಲಿದೆ, * ಪ್ರಸ್ತುತ ಆಹಾರ ಮತ್ತು ಕೃಷಿ ಸಂಸ್ಥೆ 1945 ರ ಅಕ್ಟೋಬರ್'ನಲ್ಲಿ ಸ್ಥಾಪನೆ ಮಾಡಲಾಗಿದೆ, ಇದೀಗ ಇದು 197 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ, ಹಾಗೂ ತನ್ನ ಪ್ರಧಾನ ಕಛೇರಿ ಇಟಲಿಯ ರೋಮ್ನಲ್ಲಿ ಹೊಂದಿದೆ.